ಕನಾ೯ಟಕ ಸಾಮಾನ್ಯ ಪ್ರವೇಶ ಪರೀಕ್ಷೆ: ಆಳ್ವಾಸ್ ವಿದ್ಯಾಥಿ೯ಗಳ ಶ್ರೇಷ್ಠ ಸಾಧನೆ-728 ವಿದ್ಯಾಥಿ೯ಗಳು ರಾಜ್ಯದ ಅಗ್ರಗಣ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಅಹ೯

ಕನಾ೯ಟಕ ಸಾಮಾನ್ಯ ಪ್ರವೇಶ ಪರೀಕ್ಷೆ: ಆಳ್ವಾಸ್ ವಿದ್ಯಾಥಿ೯ಗಳ ಶ್ರೇಷ್ಠ ಸಾಧನೆ-728 ವಿದ್ಯಾಥಿ೯ಗಳು ರಾಜ್ಯದ ಅಗ್ರಗಣ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಅಹ೯


ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)-2026ರಲ್ಲಿ ಮತ್ತೊಮ್ಮೆ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಇಂಜಿನಿಯರಿಂಗ್ ವಿಭಾಗದ ಮೊದಲ 10,000 ರ‍್ಯಾಂಕ್‌ಗಳಲ್ಲಿ ಒಟ್ಟು 728 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದು, ಇವರೆಲ್ಲರೂ ರಾಜ್ಯದ ಅಗ್ರಗಣ್ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಅರ್ಹರಾಗಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆಯ ಮೊದಲ 10 ರ‍್ಯಾಂಕ್‌ಗಳಲ್ಲಿ 3, ಮೊದಲ 50 ರ‍್ಯಾಂಕ್‌ಗಳಲ್ಲಿ 15, ಮೊದಲ 100 ರ‍್ಯಾಂಕ್‌ಗಳಲ್ಲಿ 18 ಹಾಗೂ ಮೊದಲ 200 ರ‍್ಯಾಂಕ್‌ಗಳಲ್ಲಿ 46 ರ‍್ಯಾಂಕ್‌ಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಬಾಚಿಕೊಂಡಿದ್ದಾರೆ. ಅದೇ ರೀತಿ ಮೊದಲ 500 ರ‍್ಯಾಂಕ್‌ಗಳಲ್ಲಿ 187, ಮೊದಲ 1,000 ರ‍್ಯಾಂಕ್‌ಗಳಲ್ಲಿ 429 ಮತ್ತು ಮೊದಲ 2,000 ರ‍್ಯಾಂಕ್‌ಗಳಲ್ಲಿ 914 ರ‍್ಯಾಂಕ್‌ಗಳು ಆಳ್ವಾಸ್ ಪಾಲಾಗಿವೆ.

ವಿಜ್ಞಾನ ವಿಭಾಗದ ಪಿಸಿಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ಪರೀಕ್ಷೆಯಲ್ಲಿ 8 ವಿದ್ಯಾರ್ಥಿಗಳು 180ರಲ್ಲಿ 170ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. 51 ವಿದ್ಯಾರ್ಥಿಗಳು 160ಕ್ಕೂ ಅಧಿಕ, 145 ವಿದ್ಯಾರ್ಥಿಗಳು 150ಕ್ಕೂ ಅಧಿಕ, 951 ವಿದ್ಯಾರ್ಥಿಗಳು 120ಕ್ಕೂ ಅಧಿಕ ಹಾಗೂ 1,392 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ) ವಿಭಾಗದಲ್ಲಿ ಒರ್ವ ವಿದ್ಯಾರ್ಥಿ 180ರಲ್ಲಿ 170ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಉಳಿದಂತೆ 11 ವಿದ್ಯಾರ್ಥಿಗಳು 160ಕ್ಕೂ ಅಧಿಕ, 35 ವಿದ್ಯಾರ್ಥಿಗಳು 150ಕ್ಕೂ ಅಧಿಕ, 568 ವಿದ್ಯಾರ್ಥಿಗಳು 120ಕ್ಕೂ ಅಧಿಕ ಹಾಗೂ 937 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಕೃಷಿ, ಆಹಾರ ವಿಜ್ಞಾನ ಮತ್ತು ಸೆರಿಕಲ್ಚರ್ ವಿಷಯಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾವನಾ ಬಿ ಆರ್ 2ನೇ ರ‍್ಯಾಂಕ್ ಪಡೆದಿದ್ದಾರೆ. ಕ್ಲಾರೆನ್ಸ್ ಡಿಸೋಜಾ ಬಿಎಸ್ಸಿ ಅಗ್ರಿ ಮತ್ತು ಸೆರಿಕಲ್ಚರ್‌ನಲ್ಲಿ 14ನೇ ರ‍್ಯಾಂಕ್, ನ್ಯಾಚುರೋಪತಿಯಲ್ಲಿ 20ನೇ ರ‍್ಯಾಂಕ್, ಬಿ.ಫಾರ್ಮ ಹಾಗೂ ಡಿ.ಫಾರ್ಮದಲ್ಲಿ 35ನೇ ರ‍್ಯಾಂಕ್, ಇಂಜಿನಿಯರಿಂಗ್‌ನಲ್ಲಿ 42ನೇ ರ‍್ಯಾಂಕ್ ಮತ್ತು ನರ್ಸಿಂಗ್ ಹಾಗೂ ಪಶುವೈದ್ಯಕೀಯ ವಿಭಾಗದಲ್ಲಿ 44ನೇ ರ‍್ಯಾಂಕ್ ಗಳಿಸಿದ್ದಾರೆ. ಸುಹರ್ಷ ಹರೀಶ್ ಹೆಗ್ಡೆ ನರ್ಸಿಂಗ್ ಹಾಗೂ ಪಶುವೈದ್ಯಕೀಯದಲ್ಲಿ 31ನೇ ರ‍್ಯಾಂಕ್ ಮತ್ತು ಬಿಫಾರ್ಮ ಹಾಗೂ ಫಾರ್ಮ ಡಿ ವಿಭಾಗದಲ್ಲಿ 47ನೇ ರ‍್ಯಾಂಕ್ ಪಡೆದಿದ್ದಾರೆ.

ರಕ್ಷಿತಾ ಮಂಜುನಾಥ್ ಸಂಗನಪೇಟ್ ಬಿಪಿಟಿ ಹಾಗೂ ಎಎಚ್‌ಎಸ್‌ನಲ್ಲಿ 39ನೇ ರ‍್ಯಾಂಕ್ ಪಡೆದರೆ, ಪ್ರೀತಮ್ ಭೀಮಪ್ಪ ಕೊಣ್ಣೂರ್ ಪಶುವೈದ್ಯಕೀಯದಲ್ಲಿ 70ನೇ ರ‍್ಯಾಂಕ್ ಮತ್ತು ಫುಡ್ ಸೈನ್ಸ್‌ನಲ್ಲಿ 108ನೇ ರ‍್ಯಾಂಕ್ ಗಳಿಸಿದ್ದಾರೆ. ಗಣೇಶ್ ಗೋಪಾಲ್ ಕುಂಬಾರ್ ಬಿಪಿಓದಲ್ಲಿ 97ನೇ ರ‍್ಯಾಂಕ್ ಮತ್ತು ದಿಶಾ ಹೆಚ್  ಶೆಟ್ಟಿ ಬಿಪಿಒನಲ್ಲಿ 99ನೇ ರ‍್ಯಾಂಕ್ ಪಡೆದಿದ್ದಾರೆ. ಕುಶಾಲ್ ಕೆಯು ಅಗ್ರಿ ಹಾಗೂ ಫುಡ್ ಸೈನ್ಸ್‌ನಲ್ಲಿ 106ನೇ ರ‍್ಯಾಂಕ್, ಬಸವರಾಜ್ ಮಲ್ಲಪ್ಪ ಬಿಪಿಟಿ ಹಾಗೂ ಹೋಮ್ ಸೈನ್ಸ್‌ನಲ್ಲಿ 120ನೇ ರ‍್ಯಾಂಕ್ ಮತ್ತು ವೈಭವಿ ಎಂ ಫುಡ್ ಸೈನ್ಸ್, ಸೆರಿಕಲ್ಚರ್ ಹಾಗೂ ಬಿಎಸ್ಸಿ ಅಗ್ರಿಯಲ್ಲಿ 122ನೇ ರ‍್ಯಾಂಕ್ ಹಾಗೂ ನ್ಯಾಚುರೋಪತಿಯಲ್ಲಿ 136ನೇ ರ‍್ಯಾಂಕ್ ಗಳಿಸಿದ್ದಾರೆ.

ವೈಭವಿ ಟಿ ಎಚ್ ಅಗ್ರಿ ಹಾಗೂ ಫುಡ್ ಸೈನ್ಸ್‌ನಲ್ಲಿ 149ನೇ ರ‍್ಯಾಂಕ್, ಮೆಲ್ರೋಯ್ ಕ್ಯಾಸ್ಟಲಿನೋ ಬಿಪಿಒದಲ್ಲಿ 161ನೇ ರ‍್ಯಾಂಕ್ ಮತ್ತು ಸರ‍್ಯಕಾಂತ್ ಎಸ್ ಪಾಟೀಲ್ ಪಶುವೈದ್ಯಕೀಯದಲ್ಲಿ 172ನೇ ರ‍್ಯಾಂಕ್ ಹಾಗೂ ಬಿಎಸ್ಸಿ ನರ್ಸಿಂಗ್‌ನಲ್ಲಿ 173ನೇ ರ‍್ಯಾಂಕ್ ಪಡೆದಿದ್ದಾರೆ. ಕಿರಣ್ ಕುಮಾರ್ ಪಶುವೈದ್ಯಕೀಯದಲ್ಲಿ 180ನೇ ರ‍್ಯಾಂಕ್, ಸಾನ್ವಿ ಸುದೀರ್ ಅಗ್ರಿ, ಫುಡ್ ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 187ನೇ ರ‍್ಯಾಂಕ್, ಸುಮಿತ್ ವಿಕೆ ಅಗ್ರಿ, ಫುಡ್ ಸೈನ್ಸ್ ಮತ್ತು ಸೆರಿಕಲ್ಚರ್‌ನಲ್ಲಿ 196ನೇ ರ‍್ಯಾಂಕ್ ಹಾಗೂ ರಾಹುಲ್ ಜಂಭಗಿ ಪಶುವೈದ್ಯಕೀಯದಲ್ಲಿ 196ನೇ ರ‍್ಯಾಂಕ್ ಮತ್ತು ನರ್ಸಿಂಗ್‌ನಲ್ಲಿ 197ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದ ಮೊದಲ 1,000 ರ‍್ಯಾಂಕ್‌ಗಳಲ್ಲಿ ಆಳ್ವಾಸ್ ಕಾಲೇಜಿನ 38 ವಿದ್ಯಾರ್ಥಿಗಳು ಮತ್ತು ಮೊದಲ 5,000 ರ‍್ಯಾಂಕ್‌ಗಳಲ್ಲಿ 228 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ರ‍್ಯಾಂಕ್ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article