ಹುಟ್ಟಿದ ದಿನದಂದು ಗಿಡಗಳನ್ನು ನೆಡಿ: ಒಂಟಿಕಟ್ಟೆಯಲ್ಲಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ವಲಯಾರಾಣ್ಯಾಧಿಕಾರಿ ಕಿರಣ್ ಕುಮಾರ್ ಸಲಹೆ

ಹುಟ್ಟಿದ ದಿನದಂದು ಗಿಡಗಳನ್ನು ನೆಡಿ: ಒಂಟಿಕಟ್ಟೆಯಲ್ಲಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ವಲಯಾರಾಣ್ಯಾಧಿಕಾರಿ ಕಿರಣ್ ಕುಮಾರ್ ಸಲಹೆ


ಮೂಡುಬಿದಿರೆ: ವಿಶ್ವ ಪರಿಸರ ದಿನದ ಅಂಗವಾಗಿ ಮೂಡುಬಿದಿರೆ ಅರಢ್ಯ ಇಲಾಖೆಯ ವತಿಯಿಂದ ಮಾಪಾ೯ಡಿ ಗ್ರಾಮದ ದ. ಕ. ಜಿ. ಪಂ. ಸ. ಹಿ. ಪ್ರಾ. ಶಾಲೆ ಒಂಟಿಕಟ್ಟೆ ಇಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. 


ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್ ಜಿ.ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಇಂದು ಪರಿಸರವು ನಾಶದ ಅಂಚಿನಲ್ಲಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪರಿಸರಕ್ಕೆ ನಮ್ಮಿಂದ ಏನಾದರೂ ಕೊಡುಗೆಯನ್ನು ನೀಡಬೇಕೆಂದರೆ ಅದು ನಾವು ಗಿಡಗಳನ್ನು ನೆಡುವುದರಿಂದ ಮಾತ್ರ ಸಾಧ್ಯ. ಪರಿಸರದ ಬಗ್ಗೆ ಕಾಳಜಿ ಮೂಡಬೇಕೆಂದರೆ ಮಕ್ಕಳು  ತಮ್ಮ ಹುಟ್ಟಿದ ದಿನದಂದು ಗಿಡಗಳನ್ನು ನೆಡುವ ಮೂಲಕ ಬತ್೯ಡೇಯನ್ನು ಆಚರಿಸಬೇಕೆಂದು ಸಲಹೆ ನೀಡಿದರು. 

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಮತ್ತು ಮುಖ್ಯ ಶಿಕ್ಷಕಿ ಎಲ್ವೀರಾ  ಪಿಂಟೋ ಗಿಡಗಳನ್ನು ನೆಟ್ಟು ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.

ಉಪ ವಲಯಾರಣ್ಯಾಧಿಕಾರಿಗಳಾದ ಗುರುಮೂತಿ೯, ಗಸ್ತು ಅರಣ್ಯ ಪಾಲಕರಾದ ಶಂಕರ್ ಗೌಡ, ಭರತೇಶ್ ಸುವಣ೯, ಸ್ಮಿತಾ, ಅರಣ್ಯ ವೀಕ್ಷಕ ನಾರಾಯಣ, ವಾಹನ ಚಾಲಕ ಮಿಥುನ್,  ಶಿಕ್ಷಕ ವೃಂದದವರು ಈ ಸಂದಭ೯ದಲ್ಲಿದ್ದರು.

ನೆಲ್ಲಿಕಾಯಿ, ನೇರಳೆ, ಮಾವು ಹಲಸು ಹಾಗೂ ಪುನರ್ ಪುಳಿ ಗಿಡಗಳನ್ನು ನೆಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article