ಅರಣ್ಯ ಇಲಾಖೆಯ ಸಹಯೋಗದಲ್ಲಿ ಜ್ಯೋತಿನಗರ, ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ಶಾಲೆಗಳಲ್ಲಿ "ಏಕ್ ಪೇಡ್ ಮಾ ಕೆ ನಾಮ್"

ಅರಣ್ಯ ಇಲಾಖೆಯ ಸಹಯೋಗದಲ್ಲಿ ಜ್ಯೋತಿನಗರ, ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ಶಾಲೆಗಳಲ್ಲಿ "ಏಕ್ ಪೇಡ್ ಮಾ ಕೆ ನಾಮ್"


ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮೂಡುಬಿದಿರೆಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪುರಸಭಾ ವ್ಯಾಪ್ತಿಯ ದ. ಕ.ಜಿ. ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜ್ಯೋತಿನಗರದ ಇಕೋ ಕ್ಲಬ್ ನೇತೃತ್ವದಲ್ಲಿ "ಏಕ್ ಪೇಡ್ ಮಾ ಕೆ ನಾಮ್" ಎಂಬ ವಾಕ್ಯದೊಂದಿಗೆ ಶಾಲಾ ಆವರಣದಲ್ಲಿ ಗಿಡ ನೆಡುವ ಕಾಯ೯ಕ್ರಮ ನಡೆಯಿತು. 

ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್ ಮೋನಿಸ್, ಉಪವಲಯಾರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರಾದ ಶಂಕರ್ ಗೌಡ, ಭರತೇಶ್ ಸುವಣ೯, ಸ್ಮಿತಾ ಮತ್ತು ಅರಣ್ಯ ವೀಕ್ಷಕ ನಾರಾಯಣ ಹಾಗೂ ಶಿಕ್ಷಕ ವೃಂದದವರು ಈ ಸಂದಭ೯ದಲ್ಲಿದ್ದರು.


ಕಲ್ಲಬೆಟ್ಟು ಮೊರಾಜಿ೯ ದೇಸಾಯಿ ಶಾಲೆಯಲ್ಲಿ ಪ್ರಾಂಶುಪಾಲರಾದ ಸಂಗನ ಬಸಯ್ಯ ಹೀರೇಮಠ್ ಅವರು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದಭ೯ದಲ್ಲಿ ಉಪವಲಯಾರಣ್ಯಾಧಿಕಾರಿ ಗುರುಮೂರ್ತಿ, ಗಸ್ತು ಅರಣ್ಯ ಪಾಲಕರಾದ ಶಂಕರ್ ಗೌಡ, ಭರತೇಶ್ ಸುವಣ೯, ಸ್ಮಿತಾ ಮತ್ತು ಅರಣ್ಯ ವೀಕ್ಷಕ ನಾರಾಯಣ ಹಾಗೂ ಶಿಕ್ಷಕ ವೃಂದದವರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article