ಮೂಡುಬಿದಿರೆ: ಮನೆಕೆಲಸಕ್ಕಿದ್ದ ಜಾರ್ಖಂಡ್ ಮೂಲದ ಮಹಿಳೆ ನಾಪತ್ತೆ

ಮೂಡುಬಿದಿರೆ: ಮನೆಕೆಲಸಕ್ಕಿದ್ದ ಜಾರ್ಖಂಡ್ ಮೂಲದ ಮಹಿಳೆ ನಾಪತ್ತೆ


ಮೂಡುಬಿದಿರೆ: ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ದರೆಗುಡ್ಡೆ ಸಮೀಪದ ಕಕ್ಕೆಕಾಡು ಬಳಿಯ ಮನೆಯಿಂದ ನಾಪತ್ತೆಯಾಗಿರುವ ಘಟನೆ ಜೂನ್ 9 ರಂದು ನಡೆದಿದೆ. ಈ ಕುರಿತು ಮನೆಯವರು ಮೂಡುಬಿದಿರೆ ಪೊಲೀಸ್ ಠಾಣೆ ದೂರು ನೀಡಿದ್ದಾರೆ.

ಕರ್ಮೇಲಾ ಸೋರೆನ್ (48) ನಾಪತ್ತೆಯಾದ ಮಹಿಳೆ. ಕಳೆದ ಎರಡು ವರ್ಷಗಳಿಂದ ಆನೆಗುಡ್ಡೆ ಮತ್ತು ದರೆಗುಡ್ಡೆ ಮಧ್ಯದ ಕಕ್ಕೆಕಾಡು ನಿವಾಸಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ಈಕೆ, ಜೂನ್ 9 ರ ಮಧ್ಯಾಹ್ನ 12.30 ರ ಸುಮಾರಿಗೆ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಾಳೆ.

ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆ ನಡೆದುಕೊಂಡು ಹೋಗುತ್ತಿರುವುದು ದಾಖಲಾಗಿದೆ. ದರೆಗುಡ್ಡೆ ರಸ್ತೆಯ ಮೂಲಕ ತೆರಳಿದ ಈಕೆ, ಮಧ್ಯಾಹ್ನ 2.30 ರ ಸುಮಾರಿಗೆ ಖಾಸಗಿ ಬಸ್ ಹತ್ತಿರುವುದು ಖಚಿತವಾಗಿದೆ. ಬಸ್ ನಿರ್ವಾಹಕರು ನೀಡಿದ ಮಾಹಿತಿಯ ಪ್ರಕಾರ, ಮಧ್ಯಾಹ್ನ 2.45 ಕ್ಕೆ ಮಹಿಳೆ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಇಳಿದಿದ್ದಾಳೆ. ಬಸ್‌ನಲ್ಲಿ ಟಿಕೆಟ್ ಕೇಳಿದಾಗ ಈಕೆ ಸರಿಯಾಗಿ ಸ್ಪಂದಿಸಿಲ್ಲ ಹಾಗೂ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡುಬಂದಿದ್ದಾಳೆ ಎಂದು ತಿಳಿದುಬಂದಿದೆ.

ನಾಪತ್ತೆಯಾದ ಮಹಿಳೆಯ ಮೊಬೈಲ್ ಫೋನ್ ಮಧ್ಯಾಹ್ನ ಗಂಟೆಗೆ ಸ್ವಿಚ್ ಆಫ್ ಆಗಿದ್ದು, ಕೊನೆಯ ಟವರ್ ಲೊಕೇಶನ್ ಮೂಡುಬಿದಿರೆಯ 'ಪಂಚರತ್ನ ಹೋಟೆಲ್ ' ಬಳಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ.

ನಾಪತ್ತೆಯಾದ ಸಮಯದಲ್ಲಿ ಗುಲಾಬಿ ಬಣ್ಣದ ನೈಟಿ ಧರಿಸಿದ್ದು, ಕೈಯಲ್ಲಿ ನೀರಿನ ಬಾಟಲಿ ಹಾಗೂ ಚಿಪ್ಸ್ ಪ್ಯಾಕೆಟ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮೂಡುಬಿದಿರೆ ಬಸ್ ಸ್ಟ್ಯಾಂಡ್, ಮಿಜಾರು, ಹಾಗೂ ಸಂಪಿಗೆ ಚರ್ಚ್ ರಸ್ತೆಯ ಮಾರ್ಕೆಟ್ ಮುಂತಾದ ಕಡೆಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿದ್ದರೂ ಮಹಿಳೆಯ ಯಾವುದೇ ಸುಳಿವು ಲಭ್ಯವಾಗಿಲ್ಲ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article