ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಬಿಜೆಪಿ ಮುಲ್ಕಿ ಮೂಡುಬಿದಿರೆ ಮಂಡಲದ ನಗರ ಮಹಾಶಕ್ತಿ ಕೇಂದ್ರದಿಂದ ಆಚರಣೆ
Sunday, June 21, 2026
ಮೂಡುಬಿದಿರೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾರತೀಯ ಜನತಾ ಪಾಟಿ೯ ಮುಲ್ಕಿ ಮೂಡುಬಿದಿರೆ ಮಂಡಲ, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿಯ ವತಿಯಿಂದ ಕಾಮಧೇನು ಸಭಾಭವನದಲ್ಲಿ ಯೋಗವನ್ನು ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು.
ಮುಲ್ಕಿಯ ಯೋಗ ಗುರು ರಾಘವೇಂದ್ರ ಆಚಾರ್ಯ ಅವರು ದೀಪ ಬೆಳಗಿಸಿ ಕಾಯ೯ಕ್ರಮವನ್ನು ಉದ್ಘಾಟಿಸಿದರು.
ನಂತರ ಯೋಗಾಸನ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿ ನೀಡಿದರು.
ಪತಂಜಲಿಯ ಯೋಗ ಶಿಕ್ಷಕ ಪ್ರಕಾಶ್ ಅಮೀನ್, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪ್ರಧಾನ ಕಾಯ೯ದಶಿ೯ ಯಶವಂತ್ ಮಾಸ್ತಿಕಟ್ಟೆ, ಶಕ್ತಿ ಕೇಂದ್ರದ ಪ್ರಮುಖ್ ಶಶಿಕಿರಣ್ ಕಲ್ಲಬೆಟ್ಟು, ಸಾತ್ವಿಕ್ ಮಲ್ಯ, ಕರುಣಾಕರ ಶೆಟ್ಟಿ, ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯ ಸೌಮ್ಯ ಶೆಟ್ಟಿ, ಎಸ್. ಟಿ ಮೋಚಾ೯ ಅಧ್ಯಕ್ಷ ಅಣ್ಣಪ್ಪ ಕೆ. ಎಸ್, ಯುವ ಮೋಚಾ ಕಾಯ೯ದಶಿ೯ಗಳಾದ ಗೌತಮ್ ರೈ , ನಾಗೇಶ್ ಪ್ರಭು, ಪ್ರಜ್ವಲ್ ಶೆಣೈ ಮತ್ತಿತರರು ಭಾಗವಹಿಸಿದ್ದರು.



