ಮೂಡುಬಿದಿರೆ ರೋಟರಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ,  ಶಿಕ್ಷಕರ ಹಾಗೂ ಪೋಷಕರ ಸಭೆ

ಮೂಡುಬಿದಿರೆ ರೋಟರಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕರ ಹಾಗೂ ಪೋಷಕರ ಸಭೆ


ಮೂಡುಬಿದಿರೆ: ರೋಟರಿ ಶಿಕ್ಷಣ ಸಂಸ್ಥೆಗಳ 2026-27ನೇ ಸಾಲಿನ ಆಡಳಿತ ಮಂಡಳಿ ಹಾಗೂ ಪೋಷಕರ ಮಹಾಸಭೆಯು ಶನಿವಾರ ಗಂಟೆಗೆ ಅಮರಾವತಿ ಸಭಾಂಗಣದಲ್ಲಿ  ಯಶಸ್ವಿಯಾಗಿ ಜರುಗಿತು.   

ಸಂಸ್ಥೆಯ ಅಧ್ಯಕ್ಷ ನಾರಾಯಣ  ಪಿ.ಎಂ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ  ಶೈಕ್ಷಣಿಕ ಚಟುವಟಿಕೆಗಳಿಗೆ ಪೋಷಕರ ಸಹಕಾರ ಅತೀ ಮುಖ್ಯ ಎಂದು ನುಡಿದರು. 

ಮೂಡಬಿದಿರೆ ಸಮುದಾಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾl ಅಕ್ಷತಾ ಗರ್ಭಕೋಶದ ಕ್ಯಾನ್ಸರ್ ಮತ್ತು ಅದರ ಲಸಿಕೆ ತಗೆದುಕೊಳ್ಳುವ ಬಗೆಗೆ ಮಾಹಿತಿ ನೀಡಿದರು.

ಈ ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಯಿತು.  

ಸಂಸ್ಥೆಯ ಸಂಚಾಲಕರಾದ ಜೆ.ಡಬ್ಲ್ಯೂ. ಪಿಂಟೋ ಅವರು ಎಲ್ಲರನ್ನೂ ಆದರದಿಂದ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡೀಲನ್ ಮಸ್ಕರೇನ್ಹಸ್, ನಮ್ರತಾ ಕಿಣಿ ಹಾಗೂ ವೈಶಾಲಿ ಅವರು ಸಾಧಕರ ಪಟ್ಟಿ ವಾಚಿಸಿದರು. 

ಸಭೆಯಲ್ಲಿ ಪೋಷಕರು ತಮ್ಮ ಅನಿಸಿಕೆ ಹಾಗೂ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡರು. 

ಸಂಸ್ಥೆಯ ಸಂಚಾಲಕರಾದ ಪ್ರವೀಣ್‌ಚಂದ್ರ ಜೈನ್, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ  ಎ.ಕೆ. ರಾವ್ ಧ್ಯೇಯೋದ್ದೇಶಗಳನ್ನು ಬಗ್ಗೆ ಮಾಹಿತಿ ನೀಡಿದರು.  

ಸಂದರ್ಭದಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ವೀರೂಪಾಕ್ಷಪ್ಪ,  ರೋಟರಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ  ಜಯರಾಮ್ ಕೋಟ್ಯಾನ್ , ಕೋಶಾಧಿಕಾರಿ ಗಳಾದ ಶ್ರೀ ರತ್ನಾಕರ್ ಜೈನ್, ಹಾಗೂ ಸದಸ್ಯರಾದ ದಯಾನಂದ ಶೆಟ್ಟಿಗಾರ್, ಅಬ್ದುಲ್ ರೌವೂಫ ,ರಾಮ ಕೋಟ್ಯಾನ್, ಹಾಗೂ ಸೂರಜ್ ಬನ್ನಡ್ಕ, ಮೂರು ಸಂಸ್ಥೆಯ   ಮುಖ್ಯಸ್ಥರಾದ ರವಿಕುಮಾರ್, ಉಪಸ್ಥಿತರಿದ್ದರು. 

ಲಕ್ಷ್ಮಿ ಪಿ. ಮರಾಠೆ ಹಾಗೂ  ತಿಲಕಾ ಅನಂತವೀರ್ ಜೈನ್ ಅವರು ಸಂಸ್ಥೆಯ 2026-27 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಅವಲೋಕನದೊಂದಿಗೆ  ಪ್ರಮುಖ ವಿಷಯಗಳನ್ನು ಪೋಷಕರ ಮುಂದೆ ಮಂಡಿಸಿದರು. ಇವರು ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಬಗೆಗೆ ಮೆಚ್ಚುಗೆಗಳನ್ನು ವ್ಯಕ್ತ ಪಡಿಸಿದರು. ಸಹಾಯಕ ಶಿಕ್ಷಕಿ ಜ್ಯಾನೆಟ್ ಸ್ಯಾಂಕ್ಟಿಸ್ ಮತ್ತು ಸಹಾಯಕ ಶಿಕ್ಷಕ ಗೋಪಾಲಕೃಷ್ಣ ಜಿ.ಕೆ. ಕಾರ್ಯಕ್ರಮವನ್ನು ನಿರೂಪಿಸಿದರು. ಹಿರಿಯ ಸಂಯೋಜಕ ಗಜಾನನ ಮರಾಠೆ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article