ಕೆರೆಗೆ ಬಿದ್ದು ವೃದ್ಧ ಮೃತ್ಯು

ಕೆರೆಗೆ ಬಿದ್ದು ವೃದ್ಧ ಮೃತ್ಯು

ಪುತ್ತೂರು: ನಗರಸಭೆ ವ್ಯಾಪ್ತಿಯ ಸಿಂಗಾಣಿ ಎಂಬಲ್ಲಿ ವ್ಯಕ್ತಿಯೋರ್ವರು ತೋಟದ ಕೆರೆಗೆ ಬಿದ್ದ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.

ಸಿಂಗಾಣಿ ನಿವಾಸಿ ವಲೇರಿಯನ್ ಡಿ’ಸೋಜ (62) ಮೃತಪಟ್ಟವರು. 

ಅವರು ಹುಲ್ಲು ತರಲೆಂದು ತೋಟಕ್ಕೆ ಹೋದವರು ಮನೆಗೆ ವಾಪಸಾಗದೆ ಇದ್ದುದರಿಂದ ಪುತ್ರ ಹುಡುಕಿಕೊಂಡು ಹೋದಾಗ ಕೆರೆಯ ಬಳಿ ಚಪ್ಪಲಿ, ಕತ್ತಿ ಕಂಡಿತ್ತು. ಸಂಶಯಗೊಂದು ಅಗ್ನಿಶಾಮಕ ದಳದವರ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದಾಗ ವಲೇರಿಯನ್ ಅವರ ಮೃತ ದೇಹ ಪತ್ತೆಯಾಗಿದೆ.

ಅವರು ಆಕಸ್ಮಿಕವಾಗಿ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವುದಾಗಿ ಮೃತರ ಪುತ್ರ ವಿನಿಲ್ ಡಿ’ಸೋಜ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article