ಕುಕ್ಕೆ: 40,00ಗಿಂತಲೂ ಅಧಿಕ ಭಕ್ತರ ಆಗಮನ

ಕುಕ್ಕೆ: 40,00ಗಿಂತಲೂ ಅಧಿಕ ಭಕ್ತರ ಆಗಮನ


ಸುಬ್ರಹ್ಮಣ್ಯ: ನಾಗಾರಾಧನೆಯ ಸುಪ್ರಸಿದ್ಧ ಕ್ಷೇತ್ರ ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಶನಿವಾರ 40,000 ಗಿಂತಲೂ ಹೆಚ್ಚು ಭಕ್ತರ ಆಗಮನವಾಗಿದೆ. 


ಶುಕ್ರವಾರ ರಂಜಾನ್ ರಜೆ, ಶನಿವಾರ ನಾಲ್ಕನೇ ಶನಿವಾರ ರಜೆ, ಹಾಗೂ ಆದಿತ್ಯವಾರ ರಜೆಯಾಗಿ ಸರಣಿ ರಜೆಗಳು ಬಂದ ಕಾರಣ ಸರಕಾರಿ ಕಚೇರಿಗಳು ಇನ್ನಿತರ ಸಂಘಗಳ ಸಂಸ್ಥೆಗಳ ನೌಕರರಿಗೆ ಅನುಕೂಲವಾದ್ದರಿಂದ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಸೇವೆ ಮಾಡುತ್ತಾ ಶುಕ್ರವಾರದಿಂದಲೇ ಕುಕ್ಕೆಗೆ ಅಧಿಕ ಸಂಖ್ಯೆಯಲ್ಲಿ  ಭಕ್ತರ ಆಗಮನವಾಗಿದೆ. 


ಶುಕ್ರವಾರ ಹಾಗೂ ಶನಿವಾರ ದೇವಳದ ಎಲ್ಲ ವಸತಿಗೃಹಗಳು ತುಂಬಿದ್ದು ಖಾಸಗಿ ವಸತಿ ಗ್ರಹಗಳಲ್ಲಿ ಕೂಡ ಭಕ್ತರ ಕಾದರಿಸುವಿಕೆ ಹಾಗೂ ರಾತ್ರಿ ವಾಸ್ತವ್ಯಕ್ಕಾಗಿ ಕೊಠಡಿಗಳು ಭರ್ತಿಯಾಗಿ ಅದೆಷ್ಟೋ ಭಕ್ತರು ತಂಗುವಿಕೆಗಾಗಿ ಕೊಠಡಿ ಇಲ್ಲದೆ ಶ್ರೀ ದೇವಳದ ರಥ ಬೀದಿ ಸಭಾಂಗಣದಲ್ಲಿ ಹಾಗೂ ಶ್ರೀ ದೇವಳದ ಛತ್ರಗಳಲ್ಲಿ  ಆಶ್ರಯವನ್ನು ಪಡೆದಿದ್ದರು.

ಇತ್ತ ಶ್ರೀ ದೇವಳದ ಸುತ್ತಮುತ್ತ ಹಾಗೂ ಆದಿಸುಬ್ರಹ್ಮಣ್ಯ ಸುತ್ತುಮುತ್ತು ಇರುವ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಬರ್ತಿಯಾಗಿದ್ದು ಮಾರ್ಗದ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಪ್ರಮೇಯ ಕೂಡ ಬಂದು ಒದಗಿತ್ತು. ಶನಿವಾರ ಮುಂಜಾನೆ ಎಂದಲೇ ಕುಮಾರಧಾರ ಸ್ಥಾನಗಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ದೇವಳದ ಹೊರಾಂಗಣದಿಂದಲೇ ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಮಾಡಿದ್ದರು. ತದನಂತರ ತೀರ್ಥ ಪ್ರಸಾದ ಸ್ವೀಕರಿಸಿರುವರು.

ನಿರಂತರ ಅನ್ನದಾನ:

ಕುಕ್ಕೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಅತ್ಯಧಿಕ ಭಕ್ತರು ಆಗಮಿಸಿದ್ದು ಬೆಳಗ್ಗೆ ಉಪಹಾರ 8 ಗಂಟೆಯಿಂದ 10 ಗಂಟೆವರೆಗೆ ನಿರಂತರವಾಗಿ ನಡೆದು ತದನಂತರ 10.30 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ನಿರಂತರವಾಗಿ ಅನ್ನದಾನ ಸೇವೆ ನಡೆದಿರುತ್ತದೆ. ಅನ್ನದಾನದಲ್ಲಿ ಸಾರು, ಸಾಂಬಾರ್, ಚಟ್ನಿ,ಪಲ್ಯ, ಪಾಯಸ, ಮಜ್ಜಿಗೆ ಇದ್ದು, ಅನ್ನದಾನದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೂ ನೀಡಲಾಗಿತ್ತು. ಶ್ರೀ ದೇವಳದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸೆಕ್ಯೂರಿಟಿ ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಸಿಬ್ಬಂದಿಯವರು ಭಕ್ತರ ಸುಗಮ ದರ್ಶನಕ್ಕೆ ಹಾಗೂ ಅನ್ನದಾನ ಸೇವೆಗೆ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯನ್ನು ಕೈಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article