ಪಣೋಲಿಬೈಲ್‌ನಲ್ಲಿ ಜು.14ಕ್ಕೆ ಅಗೇಲು, ಕೋಲ ಸೇವೆ ಇಲ್ಲ
Saturday, July 11, 2026
ಬಂಟ್ವಾಳ: ತಾಲೂಕಿನ ಕಾರುಣಿಕದ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಜುಲೈ 14 ರಂದು ಅಮಾವಾಸ್ಯೆ ಪ್ರಯುಕ್ತ ಆಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ರೀತಿ ಆಟಿ ತಿಂಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಕೋಲ ಸೇವೆ ಇರುವುದಿಲ್ಲ. ಆದರೆ ಆಗೇಲು ಸೇವೆ ಎಂದಿನಂತೆ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.