ಕೆನರಾ ಬ್ಯಾಂಕ್ ಕಳ್ಳತನಕ್ಕೆ ಯತ್ನ ಪ್ರಕರಣ: ತನಿಖೆಗೆ ವಿಶೇಷ ಪೊಲೀಸ್ ತಂಡದ ರಚನೆ
ಭಾನುವಾರ ಮಧ್ಯ ರಾತ್ರಿ ಮುಸುಕುಧಾರಿ ದುಷ್ಕರ್ಮಿಯೋರ್ವ ಬ್ಯಾಂಕಿನ ಮೇಲ್ಬಾಗದಲ್ಲಿ ವಿದ್ಯುತ್ ಕಟ್ಟರ್ ಬಳಸಿ ಒರ್ವನಿಗೆ ಒಳನುಗ್ಗಲು ಸಾಧ್ಯವಾಗುವಷ್ಟು ಮೇಲ್ಛಾಗವನ್ನು ಕೊರೆದು ಅದರ ಮೂಲಕ ಒಳಪ್ರವೇಶಿಸಿ ಬ್ಯಾಂಕಿನ ಸ್ಟ್ರಾಂಗ್ ರೂಂ ಬ್ರೇಕ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗದೆ ನಗದಾಗಲಿ, ಚಿನ್ನಾಭರಣವಾಗಲಿ ಕಳವುಗೈಲಾಗದೆ ಬರಿಗೈಯಲ್ಲಿ ವಾಪಾಸ್ ಆಗಿದ್ದ.
ಒಂಟಿಯಾಗಿಯೇ ಬ್ಯಾಂಕಿನ ಮೇಲ್ಬಾಗದಲ್ಲಿ ಈ ಕೃತ್ಯವನ್ನು ನಡೆಸಿರುವ ಖರ್ತನಾಕ್ ಕಳ್ಳ ಯಾವುದೇ ಸುಳಿವು ಬಿಟ್ಟು ಹೋಗದಿರುವುದರಿಂದ ಮತ್ತು ಈತ ಮುಸುಕುಧಾರಿಯಾಗಿದ್ದ ಹಿನ್ನಲೆಯಲ್ಲಿ ಅತನ ಗುರುತು ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟ ಸಾಧ್ಯವಾಗಿದೆ.
ಸಿಸಿ ಕ್ಯಾಮರದಲ್ಲಿ ಸೆರೆಯಾದ ಸುಳಿವನ್ನಾಧರಿಸಿ ಕಳ್ಳನ ಪತ್ತೆಕಾರ್ಯಕ್ಕೆ ಮುಂದಾಗಿರುವ ವಿಶೇಷ ಪೊಲೀಸ್ ತಂಡ ಕೆಲವೊಂದು ಮಾಹಿತಿಯನ್ನು ಕಲೆ ಹಾಕಿ ಕಳ್ಳನ ಬೆನ್ನು ಬಿದ್ದಿದೆ.
ಕೃತ್ಯದಲ್ಲಿ ಒರ್ವನೆ ನೇರ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರೂ, ಇದರ ಹಿಂದೆ ಮುರ್ನಾಲ್ಕು ಮುಂದಿಯಾದರೂ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ದುಷ್ಕರ್ಮಿ ಕೃತ್ಯ ನಡೆಸಲು ಬಂದಿರುವ ದೃಶ್ಯ ಸಿಸಿಕ್ಯಾಮರದಲ್ಲಿ ಸೆರೆಯಾಗಿದ್ದು, ವಾಪಾಸ್ ಹೋಗುವ ಸಂದರ್ಭದಲ್ಲಿ ಸಿಸಿಕ್ಯಾಮರದ ಕೇಬಲ್ ಕತ್ತರಿಸಿರುವುದರಿಂದ ದೃಶ್ಯಗಳು ಅಸ್ಪಷ್ಟವಾಗಿ ಕಂಡುಬಂದಿದೆ. ಸಧ್ಯ ವಿಶೇಷ ಪೊಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದು, ಕೆಲಭಾಗಗಳಿಗೂ ತನಿಖೆಯನ್ನು ವಿಸ್ತಿರಿಸಿ, ಆರೋಪಿಯ ಶೋಧ ಕಾರ್ಯ ಮುಂದುವರಿದಿದೆ.