ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ವಿವಿದೆಡೆ ಸಂಘಟನಾತ್ಮಕ ಸಭೆ

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ವಿವಿದೆಡೆ ಸಂಘಟನಾತ್ಮಕ ಸಭೆ


ಬಂಟ್ವಾಳ: ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಅನಂತಾಡಿ ಗ್ರಾಮದ ಗೋಳಿಕಟ್ಟೆ ಜ್ಯೋತಿ ಹೆಗ್ಡೆ ಅವರ ನಿವಾಸ,ವೀರಕಂಭ ಗ್ರಾಮದ ಕೆಲಿಂಜ ಶ್ರೀ ನಿಕೇತನ ಮಂದಿರ ಹಾಗೂ ವಿಟ್ಲಪಡ್ನೂರು ಗ್ರಾಮದ ಮೂರ್ಜೆಬೆಟ್ಟು ಅರವಿಂದ ರೈ ಅವರ ನಿವಾಸದಲ್ಲಿ  ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ (ಎಸ್ ಐ ಆರ್) ಹಾಗೂ ಸಂಘಟನಾತ್ಮಕ ಸಭೆಯು ನಡೆಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಈ ಮೂರು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಎಸ್ ಐ ಆರ್ ಅಭಿಯಾನವನ್ನು ಪ್ರತಿಯೋರ್ವ ಕಾರ್ಯಕರ್ತರು ಜವಾಬ್ದಾರಿ ಯುತವಾಗಿ ಕೈಗೊಳ್ಳಬೇಕು ಎಂದು ಕರೆ ನೀಡಿದರು

ಮತದಾರರ ಪಟ್ಟಿಯಲ್ಲಿ ಹೊಸದಾಗಿ ಅರ್ಹತೆ ಪಡೆದವರ ಹೆಸರನ್ನು ಸೇರ್ಪಡೆಗೊಳಿಸುವುದು, ಅಗತ್ಯ ತಿದ್ದುಪಡಿಗಳನ್ನು ಮಾಡಿಸುವುದು ಹಾಗೂ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಬೂತ್ ಮಟ್ಟದಲ್ಲಿ ಮನೆ,ಮನೆ ಸಂಪರ್ಕ ಅಭಿಯಾನ ನಡೆಸಬೇಕು ಎಂದು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರಲ್ಲದೆ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ ಎಂದರು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಬೂತ್ ಮಟ್ಟದ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುವುದು ಹಾಗೂ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ , ಶಿವಪ್ರಸಾದ ರೈ ಕರೋಪಾಡಿ,ಪಕ್ಷದ ಪ್ರಮುಖರಾದ ಬಿ. ದೇವದಾಸ್ ಶೆಟ್ಟಿ, ಮಾಧವ ಮಾವೆ,ರಾಮದಾಸ ಬಂಟ್ವಾಳ, ಅನಂತಾಡಿ ಗ್ರಾಮದ ಪ್ರಮುಖರಾದ ಸನತ್ ಕುಮಾರ್ ರೈ, ಮಹಾಬಲ ಪೂಜಾರಿ, ನಾಗೇಶ್ ಭಂಡಾರಿ, ಸುಜಾತಾ, ಹೇಮಂತ ತಾಲಿಪಡ್ಪು, ಗೀತಾ ಚಂದ್ರಶೇಖರ್, ತನಿಯಪ್ಪ ಗೌಡ, ಪುಷ್ಪರಾಜ್ ಚೌಟ ಮಾಣಿ, ಶಿವರಾಮ್ ಶೆಟ್ಟಿ, ಉಮೇಶ್ ಪೂಜಾರಿ, ರಮೇಶ್ ಗೌಡ, ಮೋನಪ್ಪ ಗೌಡ, ದಿನೇಶ್ ಪಿಲ್ಚಂಡಿಗುಡ್ಡೆ, ನವೀನ್ ಆಚಾರ್ಯ ,ವೀರಕಂಬಗ್ರಾಮದ ಎಸ್ ಐ ಆರ್  ಶಕ್ತಿಕೇಂದ್ರ ಸಂಚಾಲಕ ಜಯಪ್ರಸಾದ್ ಶೆಟ್ಟಿ, ಬೂತ್ ಅಧ್ಯಕ್ಷರಾದ ರವೀಂದ್ರ, ವೇಣುಗೋಪಾಲ್ ವೀರಕಂಭ, ಯಾದವ್, ಸಂದೇಶ್ ಕುಮಾರ್, ಬಿ.ಎಲ್.ಎ.-2 ಸದಸ್ಯರಾದ ಸಂದೀಪ್ ಪೂಜಾರಿ, ಚಂದ್ರಶೇಖರ ಬಾಯಿಲ, ಚಿದಾನಂದ, ಪ್ರಸಾದ್ ಶೆಟ್ಟಿ, ಪ್ರಮುಖರಾದ ಸತ್ಯಜಿತ್, ವೀರಪ್ಪ ಮೂಲ್ಯ, ಕೊರಗಪ್ಪ ಗೌಡ, ರಮೇಶ್, ವಿಶ್ವನಾಥ, ಸೀಮಾ ಮಾಧವ, ವಿಟ್ಲಪಡ್ನೂರು ಗ್ರಾಮದ ಶಕ್ತಿಕೇಂದ್ರ ಪ್ರಮುಖ ನಾಗೇಶ್ ಶೆಟ್ಟಿ, ಪ್ರಮುಖರಾದ ಆದರ್ಶ, ಸೀತಾರಾಮ ಗೌಡ, ಸುರೇಶ್ ಕೊಟ್ಟಾರಿ, ನಾಗೇಶ್ ಗೌಡ, ಚೇತನ್ ಗೌಡ, ವಿಜಯ ಪಿ., ಪ್ರೇಮಲತಾ, ರಾಮಗೌಡ, ಹರೀಶ್ ಕುಲಾಲ್, ರವೀಶ್ ಶೆಟ್ಟಿ, ಜಯಂತ ಪೂರ್ಲಪ್ಪಾಡಿ, ಧರ್ಮಾವತಿ, ವಿಶ್ವನಾಥ ಅಡಪ, ಉದಯ ಭಟ್, ರೇಷ್ಮಾ ಶಂಕರಿ, ರಾಜರಾಮ್ ಭಟ್, ಅಭಿಷೇಕ್ ರೈ, ಜಯರಾಮ ರೈ ಬೋಳಂತೂರು, ಉಮೇಶ್ ಶೆಟ್ಟಿ ಸೇರಿದಂತೆ ಬೂತ್ ಅಧ್ಯಕ್ಷರು, ಬಿ.ಎಲ್.ಎ.-2 ಸದಸ್ಯರು, ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article