ಶಿಕ್ಷಣಕ್ಕಾಗಿ ತಾಯಿಯ ಮೃತದೇಹ ದಾನ ಮಾಡಿದ ಪುತ್ರಿ

ಶಿಕ್ಷಣಕ್ಕಾಗಿ ತಾಯಿಯ ಮೃತದೇಹ ದಾನ ಮಾಡಿದ ಪುತ್ರಿ


ಬೆಳ್ತಂಗಡಿ: ವೈದ್ಯಕೀಯ ಶಿಕ್ಷಣಕ್ಕಾಗಿ ಬೆಳ್ತಂಗಡಿ ತಾಲೂಕಿನ ಆರ್ವದ ಕುಟುಂಬವೊಂದು ಯಜಮಾನಿಯ ಮೃತದೇಹವನ್ನು ದಾನ ಮಾಡಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸಾವಿನ ನಂತರವೂ ಬದುಕಬಹುದು ಮತ್ತು ಸಮಾಜಕ್ಕೆ ತಮ್ಮಿಂದ ಏನಾದರು ಉಪಕಾರವಾಗಬೇಕು ಎಂಬ ನಿಟ್ಟಿ ನಲ್ಲಿ ಮನೆಯ ಯಜಮಾನಿ ಕಾರ್ಮಿನ್ ಪಿರೇರಾ (70) ಅವರ ಮೃತದೇಹವನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದಾನ ಮಾಡಬೇಕು ಎಂಬುದು ಅವರ ಪುತ್ರಿ ಹಾಗೂ ಶಿಕ್ಷಕಿ ಪ್ಲೇವಿ ಡಿಸೋಜ ಒತ್ತಾಸೆಯಾಗಿತ್ತು.

ಹಾಗೇ ಅದರಂತೆ ತಂದೆ ಫೆಲಿಕ್ಸ್ ಡಿಸೋಜ, ಸಹೋದರ ನವೀನ್ ಡಿಸೋಜ ಬಳಿ ಚರ್ಚಿಸಿದರು. ಹಾಗೇ ಕಾರ್ಮಿನ್ ಪಿರೇರಾ ಅವರ ಮೃತದೇಹವನ್ನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article