ಜು.18 ರಂದು ತುಳು ಭವನದಲ್ಲಿ ಆಟಿಯ ಕವಿಗೋಷ್ಠಿ: ಪುಸ್ತಕ ಬಿಡುಗಡೆ

ಜು.18 ರಂದು ತುಳು ಭವನದಲ್ಲಿ ಆಟಿಯ ಕವಿಗೋಷ್ಠಿ: ಪುಸ್ತಕ ಬಿಡುಗಡೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಆಟಿಯಲ್ಲೊಂದು ಕವಿಗೋಷ್ಠಿ ಹಾಗೂ ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಜು.18 ರಂದು ಮಧ್ಯಾಹ್ನ 2.45ಕ್ಕೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.

ಖ್ಯಾತ ಯುವ ಸಾಹಿತಿ ಅಕ್ಷತಾ ರಾಜ್ ಪೆರ್ಲ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಸಾಹಿತಿ ಹಾಗೂ ತುಳು ಅಕಾಡೆಮಿಯ ಮಾಜಿ ಸದಸ್ಯ ದಿವಾ ಕೊಕ್ಕಡ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಅಕಾಡೆಮಿ ವತಿಯಿಂದ ಪ್ರಕಟಣೆಗೊಂಡ ವಲ್ಲಿ ಬೋಳ ಅವರು ಬರೆದ ‘ತುಳುವಪ್ಪೆಗ್ ಬುಲೆ ಕಾಣಿಕೆ’ ಹಾಗೂ ತಮ್ಮ ಲಕ್ಷ್ಮಣ ಅವರು ಬರೆದಿರುವ ‘ತೆಲಿಕೆದ ರಾಜೆ ಆರ್.ಕೆ.ಉಳ್ಳಾಲ್’ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಸುರೇಶ್ ಕುಮಾರ್ ಬಿ. ನಾವೂರು ಹಾಗೂ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಟ್ರಸ್ಟಿ ಕಿರಣ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಕವಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಕವಿಗಳಾದ ದೇವಿಕಾ ನಾಗೇಶ್, ಸುಲೋಚನಾ ಪಚ್ಚಿನಡ್ಕ, ಹುಸೈನ್ ಕಾಟಿಪಳ್ಳ, ಎಡ್ವರ್ಡ್ ಲೋಬೋ ತೊಕ್ಕೊಟ್ಟು, ವಿಜಯಲಕ್ಷ್ಮಿ ಕಟೀಲು, ಉಮೇಶ್ ಆಚಾರ್ಯ ಉಡುಪಿ, ವಾಸಂತಿ ಅಂಬಲಪಾಡಿ, ಮಲ್ಲಿಕಾ ಜೆ. ರೈ ಪುತ್ತೂರು, ಸತೀಶ್ ಕಕ್ಕೆಪದವು, ಗಣೇಶ್ ಅದ್ಯಪಾಡಿ, ಧನಂಜಯ ಮೂಡುಬಿದ್ರೆ, ಆಶಾಲತಾ ಚೇವಾರ್ ಕಾಸರಗೋಡು, ಪರಿಮಳ ಎನ್.ಎಂ. ಐವರ್ನಾಡ್ ಸುಳ್ಯ ಭಾಗವಹಿಸುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article