ಅಕ್ರಮ ಮರಳುಗಾರಿಕೆ: 2 ಟಿಪ್ಪರ್ ವಶಕ್ಕೆ

ಅಕ್ರಮ ಮರಳುಗಾರಿಕೆ: 2 ಟಿಪ್ಪರ್ ವಶಕ್ಕೆ


ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್‌ಗಳನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಘಟನೆಯ ವಿವರ:

ಜು.4 ರಂದು ಮಧ್ಯಾಹ್ನ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಾರಿಯಲ್ಲಿ ಮರಳು ಸಾಗಾಟ ಮಾಡುತ್ತಿರುವುದಾಗಿ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ ದೇವಾಡಿಗ ಅವರಿಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ಬಂಟ್ವಾಳ ಕುಳ ಗ್ರಾಮದ ಓಜಾಲ ಎಂಬಲ್ಲಿಗೆ ತೆರಳಿ ಪರಿಶೀಲಿಸಿದಾಗ, ಸ್ಥಳದಲ್ಲಿ KA-51-AA-3057 ಹಾಗೂ KA-21-C-6924 ನೇ ನೊಂದಣಿಯ ಮರಳು ತುಂಬಿದ ಎರಡು ಟಿಪ್ಪರ್ ಲಾರಿಗಳು ಕಂಡುಬಂದಿರುತ್ತದೆ. 

ಈ ಬಗ್ಗೆ ಲಾರಿಗಳ ಚಾಲಕರಾದ ಪುತ್ತೂರು ಕೊಡಿಪಾಡಿ ನಿವಾಸಿ ಮೊಹಮ್ಮದ್ ಇರ್ಪಾನ್ (28) ಹಾಗೂ ಪುತ್ತೂರು ಕಬಕ ನಿವಾಸಿ ನೌಷದ್ (26) ಎಂಬವರುಗಳಲ್ಲಿ ವಿಚಾರಿಸಿದಾಗ, ಈ ಮರಳನ್ನು ಕಡಬ ತಾಲೂಕು ಅಲಂಕಾರ್ ಎಂಬಲ್ಲಿಂದ ಯಾವುದೇ ಪರವಾನಿಗೆ ಅಥವಾ ದಾಖಲಾತಿ ಇಲ್ಲದೆ ಕಳ್ಳತನದಿಂದ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದು ಒಪ್ಪಿಕೊಂಡಿದ್ದಾರೆ.

ಮುಂದಿನ ಕಾನೂನುಕ್ರಮಕ್ಕಾಗಿ ಈ ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 149/2026, ಕಲಂ: 303(2) BNS 2023, ಕಲಂ: 4(1), 4(1A), 21 MMDR (MINES AND MINERALS REGULATION OF DEVELOPMENT) ACT 1957, ಕಲಂ: 3, 44 KARNATAKA MINOR MINERAL CONSISTENT RULE 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article