ನೀಟ್-ಯುಜಿ 2026 ಪರೀಕ್ಷೆ: ಶಕ್ತಿ ಪ.ಪೂ. ಕಾಲೇಜಿನ 23 ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಅರ್ಹತೆ: ಸುಹಾಸ್ ಎಸ್.ಆರ್ ಕಾಲೇಜಿಗೆ ಪ್ರಥಮ 720ರಲ್ಲಿ 554 ಅಂಕ

ನೀಟ್-ಯುಜಿ 2026 ಪರೀಕ್ಷೆ: ಶಕ್ತಿ ಪ.ಪೂ. ಕಾಲೇಜಿನ 23 ವಿದ್ಯಾರ್ಥಿಗಳ ವೈದ್ಯಕೀಯ ಪದವಿಗೆ ಅರ್ಹತೆ: ಸುಹಾಸ್ ಎಸ್.ಆರ್ ಕಾಲೇಜಿಗೆ ಪ್ರಥಮ 720ರಲ್ಲಿ 554 ಅಂಕ


ಮಂಗಳೂರು: ನೀಟ್-ಯುಜಿ 2026 ಪರೀಕ್ಷೆಯಲ್ಲಿ ಶಕ್ತಿ ಪ.ಪೂ. ಕಾಲೇಜಿನಲ್ಲಿ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 23 ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಅರ್ಹತೆಯನ್ನು ಹೊಂದಿರುತ್ತಾರೆ. 


ಶಕ್ತಿ ಪ.ಪೂ. ಕಾಲೇಜಿನ ಸುಹಾಸ್ ಎಸ್.ಆರ್. 720ರಲ್ಲಿ 554 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಪವನ್ ಮಲಗಿ 548ನೇ ಸ್ಥಾನ, ಅಭಿಷೇಕ್ ಬಸವರಾಜ್ ಜೆರ‍್ಕಲ್ 541ನೇ ಸ್ಥಾನ, ಪ್ರಸೂನ್ ಪಾಟೇಲ್ 539, ಚಿಂತನ ಪಿ.ಆರ್. 521 ಪಡೆದಿರುತ್ತಾರೆ.


500 ಅಂಕದ ಒಳಗಡೆ 5 ವಿದ್ಯಾರ್ಥಿಗಳು 400 ಅಂಕದ ಒಳಗಡೆ 7 ವಿದ್ಯಾರ್ಥಿಗಳು 300 ಅಂಕದ ಒಳಗಡೆ 5 ವಿದ್ಯಾರ್ಥಿಗಳು ಅಂಕವನ್ನು ಪಡೆದಿದ್ದಾರೆ. ಒಟ್ಟು ಸಂಸ್ಥೆಯಲ್ಲಿ 92ಶೇ. ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆಯುವುದರ ಮೂಲಕ ಸಾಧನೆಯನ್ನು ಮಾಡಿರುತ್ತಾರೆ. 


ಇವರನ್ನು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಕಾರ್ಯದರ್ಶಿ ಸಂಜಿತ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಮಂಜುನಾಥ ಚಾವಡಿ ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಸುರೇಖಾ ಆರ್. ಭಟ್ ಅಭಿನಂದಿಸಿದ್ದಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article