ಕಾಕ್ರೋರ್ಚ್ ಪಾರ್ಟಿ ಹೆಸರಲ್ಲಿ ವಿಪಕ್ಷಗಳಿಂದ ವಿಧ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಚೆಲ್ಲಾಟ: ಸತೀಶ್ ಕುಂಪಲ
ಮಂಗಳೂರು: ದೇಶದಲ್ಲಿ ಅರಾಜಕತೆ ಸೃಷ್ಟಿಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಪ್ಪುಚುಕ್ಕೆ ಇರಿಸಲು ಹವಣಿಸುತ್ತಿರುವ ವಿಪಕ್ಷಗಳು ವಿಧ್ಯಾರ್ಥಿ ಸಮುದಾಯವನ್ನು ಅದಕ್ಕಾಗಿ ಬಳಸುತ್ತಿರುವುದು ಖಂಡನೀಯ. ಕಾಕ್ರೋರ್ಚ್ ಪಾರ್ಟಿ ಅಂತ ಹೆಸರು ಅದರ ಹಿಂದೆ ಇರುವುದೆಲ್ಲಾ ದೇಶದ ಬೊಕ್ಕಸ ಕೊಳ್ಳೆ ಹೊಡೆದ ಹೆಗ್ಗಣಗಳು. ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಅಪರೇಷನ್ ಸಿಂಧೂರ ಬಗ್ಗೆ ವ್ಯಂಗ್ಯ ಮಾತನಾಡಿ, ಸೇನೆಯ ಸಾಧನೆಯ ಮೇಲೆಯೇ ಅನುಮಾನ ವ್ಯಕ್ತಪಡಿಸಿರುವ ಮಹಾನುಭಾವರೆಲ್ಲಾ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದಿರುವ ಸೂತ್ರಧಾರರು ಎನ್ನುವುದು ನಿರ್ವಿವಾದ. ಜನರಿಂದ ತಿರಸ್ಕಾರಗೊಂಡು ನಿರುದ್ಯೋಗಿಯಾಗಿರುವ ಇವರುಗಳಿಗೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವ ಪ್ರಧಾನ ಸೇವಕ ನರೇಂದ್ರ ಮೋದಿಯವರ ಸರ್ಕಾರವನ್ನು ಕೆಡವುದೇ ಆದ್ಯತೆಯಾಗಿದೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.