ಕರ್ಣಾಟಕ ಬ್ಯಾಂಕ್: ಹೆಚ್ಚುವರಿ ನಿರ್ದೇಶಕರಾಗಿ ಪಾರ್ಥಸಾರಥಿ ಪೆರಿಯಸ್ವಾಮಿ
Friday, July 31, 2026
ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ನಿರ್ದೇಶಕ ಮಂಡಳಿಗೆ ಹಿರಿಯ ತಂತ್ರಜ್ಞಾನ ಹಾಗೂ ಸೈಬರ್ ಭದ್ರತಾ ತಜ್ಞ ಪಾರ್ಥಸಾರಥಿ ಪೆರಿಯಸ್ವಾಮಿ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ (ಕಾರ್ಯನಿರ್ವಾಹಕೇತರ, ಸ್ವತಂತ್ರ ನಿರ್ದೇಶಕ) ನೇಮಕ ಮಾಡಿದೆ.
ಜುಲೈ 29, 2026ರಿಂದ ನಾಲ್ಕು ವರ್ಷಗಳ ಅವಧಿಗೆ ಈ ನೇಮಕ ಜಾರಿಗೆ ಬಂದಿದ್ದು, ಸೆಬಿ ನಿಯಮಗಳು-2015 ಹಾಗೂ ಕಂಪನಿಗಳ ಕಾಯ್ದೆ-2013ರ ಅನ್ವಯ ಬ್ಯಾಂಕ್ ಷೇರುದಾರರ ಅನುಮೋದನೆಗೆ ಒಳಪಟ್ಟಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಹಾಗೂ ಮುಖ್ಯ ಮಹಾಪ್ರಬಂಧಕ (ಐಟಿ) ಆಗಿ ಸೇವೆ ಸಲ್ಲಿಸಿರುವ ಪಾರ್ಥಸಾರಥಿ ಪೆರಿಯಸ್ವಾಮಿ ಅವರು ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೈಬರ್ ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸುವುದು, ಪ್ರಮುಖ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯಗಳನ್ನು ಆಧುನೀಕರಿಸುವುದು ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯ ಭದ್ರತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.