ನಾಳೆಯಿಂದ ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ

ನಾಳೆಯಿಂದ ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ

ಮಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಇದರ ವತಿಯಿಂದ ಜು.28 ರಿಂದ ಆ.1 ರವರೆಗೆ ನಗರದ ಮಿನಿ ವಿಧಾನಸೌಧ ಆವರಣದಲ್ಲಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕರಾವಳಿ ಸಭಾಂಗಣದಲ್ಲಿ ಖಾದಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಪ್ರದರ್ಶನದಲ್ಲಿ ಸರಕಾರಿ ನೌಕರರ ದೈನಂದಿನ ಬಳಕೆಯ ಉಡುಪುಗಳು, ಗೃಹೋಪಯೋಗಿ ಉತ್ಪನ್ನಗಳು ಮತ್ತು ಆಯ್ದ ಗುಣಮಟ್ಟದ ಖಾದಿ ಸಾಮಗ್ರಿಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಈ ಪ್ರದರ್ಶನ ಸದುಪಯೋಗವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಧಿಕಾರಿ, ನೌಕರರು  ಹಾಗೂ ಸಾರ್ವಜನಿಕರು ಪಾಲ್ಗೊಂಡು ಪಡೆದುಕೊಳ್ಳಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನ್ ಕುಮಾರ್. ಎಂ. ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article