ಎಂಸಿಎಸ್ ಸೊಸೈಟಿಗೆ 2025–26ನೇ ಸಾಲಿನಲ್ಲಿ ₹12.50 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ. 25 ಡಿವಿಡೆಂಡ್ ಹಂಚಿಕೆ
ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿರುವ ಸದಸ್ಯರಿಗೆ ಸಹಾಯಧನ ನೀಡುವ ಕುರಿತು ಪ್ರಸ್ತಾವನೆ ಮಂಡಿಸಲಾಗಿದ್ದು, ಸಾಲ ಪಡೆದ ಸದಸ್ಯರು ನಿಧನರಾದರೆ ಅವರ ವಾರಸುದಾರರು ಪಾವತಿಸಬೇಕಾದ ಸಾಲದ ಬಾಕಿ ಮೊತ್ತದಲ್ಲಿ ₹1 ಲಕ್ಷ ವಿನಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಂಘದಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು. ವಿಶೇಷವಾಗಿ ಸೌರಶಕ್ತಿ ಯೋಜನೆಗಳಿಗೆ ₹5 ಲಕ್ಷದವರೆಗೆ ಶೇ.5 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದ್ದು, ಸದಸ್ಯರು ಇದರ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಸಹಕಾರಿ ಶಿಕ್ಷಣ ನಿಧಿಗೆ ₹12,99,397 ಮೊತ್ತವನ್ನು ಸಲ್ಲಿಸಲಾಯಿತು. ಸಂಸ್ಥೆಯ ವೆಬ್‌ಸೈಟ್ ಅನ್ನು ಅನಾವರಣಗೊಳಿಸಲಾಯಿತು
ನಿರ್ದೇಶಕರಾದ ಕೆ. ಅಭಯಚಂದ್ರ ಜೈನ್, ಮನೋಜ್ ಶೆಟ್ಟಿ, ಸಿ. ಎಚ್. ಗಫೂರ್, ಎಂ. ಪಿ. ಅಶೋಕ್ ಕಾಮತ್, ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಎಂ. ಪದ್ಮನಾಭ, ಪ್ರೇಮ ಎಸ್. ಸಾಲ್ಯಾನ್, ಅನಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು.
ನಿದೇ೯ಶಕರಾದ ಜಯರಾಮ್ ಕೋಟ್ಯಾನ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಭಟ್ ವಾಷಿ೯ಕ ವರದಿ ಮಂಡಿಸಿದರು. ಸುಜಾತಾ ಮಹಾಸಭೆಯ ಸೂಚನಾ ಪತ್ರವನ್ನು ವಾಚಿಸಿದರು. ಸಂತೋಷ ನಾಯ್ಕ್ ಲೆಕ್ಕಪತ್ರ ಮಂಡಿಸಿದರು. ಹೆರಾಲ್ಡ್ ತಾವ್ರೋ ಅಂದಾಜು ಬಜೆಟ್ ಮಂಡಿಸಿದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಕಾಯ೯ಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಎಂ. ಗಣೇಶ ನಾಯಕ್ ವಂದಿಸಿದರು.
