ಅಚ್ಚರಕಟ್ಟೆ ಸುಮುಖ ಕುಣಿತ ಭಜನಾ ಮಂಡಳಿ ಉದ್ಘಾಟನೆ
Tuesday, July 7, 2026
ಮೂಡುಬಿದಿರೆ: ಕಲಿಯುಗದಲ್ಲಿ ಭಜನೆಯೇ ಶ್ರೇಷ್ಠ. ಮನೆಯಲ್ಲಿ ಮಾಡುವ ಭಜನೆಯಿಂದ ಮನೆಯಲ್ಲಿ ಸಾತ್ವಿಕ ವಾತಾವರಣ ಸ್ರಷ್ಟಿಯಾಗುತ್ತದೆ.ದೇವ ಮಂದಿರಗಳಲ್ಲಿ ಮಾಡುವ ಸಾಮೂಹಿಕ ಭಜನೆ, ಕುಣಿತ ಭಜನೆಯಿಂದ ದೇವರು ಒಲಿಯುವುದರ ಜೊತೆಗೆ ಊರಿನಲ್ಲಿ ಧನಾತ್ಮಕ ಶಕ್ತಿಯ ವಾತಾವರಣವನ್ನು ಉಂಟು ಮಾಡಿ ಆರೋಗ್ಯಕರ ಸಮಾಜಕ್ಕೆ ನಾಂದಿ ಮಾಡಿಕೊಡುತ್ತದೆ ಎಂದು ಅಚ್ಚರಕಟ್ಟೆ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ಪಡುಮಾರ್ನಾಡು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ದಯಾನಂದ ಪೈ ಹೇಳಿದರು.
ಅವರು ಇಲ್ಲಿನ ಗಣೇಶೋತ್ಸವ ಕಟ್ಟಡದ ಎಂ ದಯಾನಂದ ಪೈ ಮತ್ತು ಶ್ರೀಮತಿ ಉಷಾ ಡಿ ಪೈ ಸಭಾ ಭವನದಲ್ಲಿ ನೂತನವಾಗಿ ಪ್ರಾರಂಭಗೊಂಡ ಸುಮುಖ ಕುಣಿತ ಭಜನಾ ಮಂಡಳಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಪ್ರಗತಿಪರ ಕೃಷಿಕ ದಯಾನಂದ ಭಟ್, ಅಡ್ವೋಕೇಟ್ ಅಭಿನಂದನ ಬಲ್ಲಾಳ್, ಉದ್ಯಮಿ ಸೂರಜ್ ಜೈನ್ ಮಾರ್ನಾಡು, ಬನ್ನಡ್ಕ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಪೂಜಾರಿ ಉಪಸ್ಥಿತರಿದ್ದರು.
ನೂತನ ಸುಮುಖ ಭಜನಾ ಮಂಡಳಿಯ ಗೌರವಾಧ್ಯಕ್ಷರಾಗಿ ಪಡುಮಾರ್ನಾಡು ದಯಾನಂದ ಪೈ, ಅಧ್ಯಕ್ಷರಾಗಿ ಉಮಾವತಿ ಬಂಗೇರ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ, ಕಾರ್ಯದರ್ಶಿಯಾಗಿ ಕೃಷ್ಣಪ್ಪ ಪೆರ್ನಾಡ್ಕ, ಜೊತೆ ಕಾರ್ಯದರ್ಶಿಯಾಗಿ ಗೀತಾ, ಕೋಶಧಿಕಾರಿಯಾಗಿ ಸ್ಮಿತಾ, ಗೌರವ ಸಲಹೆಗರರಾಗಿ ಪ್ರಮೋದ್ ಪೆರ್ನಾಡ್ಕ,ಭಜನಾ ತರಭೇತುದಾರರಾಗಿ ಲಕ್ಷ್ಮಣ್ ನಾಯ್ಕ ಮತ್ತು ಪ್ರವೀಣ್ ಸಾಲ್ಯಾನ್, ಮಕ್ಕಳ ಭಜನಾ ಮಂಡಳಿಯ ನಾಯಕ ರಶ್ಮಿತ್ ಆಚಾರ್ಯ, ನಾಯಕಿ ಸಾನಿಕಾ ರವರನ್ನು ಆಯ್ಕೆ ಮಾಡಲಾಯ್ತು.
ಸ್ಮಿತಾ ಸ್ವಾಗತಿಸಿದರು. ರವಿ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.
ಉಮಾವತಿ ವಂದಿಸಿದರು.
