ಮೂಡುಬಿದಿರೆಯಲ್ಲಿ ಯುವಕನಿಗೆ ತಲವಾರು ನೀಡಿದವನೆನ್ನಲಾದ ಸಂದೇಶ್ ಪೊಲೀಸ್ ವಶಕ್ಕೆ

ಮೂಡುಬಿದಿರೆಯಲ್ಲಿ ಯುವಕನಿಗೆ ತಲವಾರು ನೀಡಿದವನೆನ್ನಲಾದ ಸಂದೇಶ್ ಪೊಲೀಸ್ ವಶಕ್ಕೆ


ಮೂಡುಬಿದಿರೆ: ಶನಿವಾರ ಸಂಜೆ ಮೂಡುಬಿದಿರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಂಡೆಕತ್ತಿ ಹಿಡಿದು ಬಸ್ ಸ್ಟಾಂಡಲ್ಲಿ ರಾಜಾರೋಷವಾಗಿ ಮೊಬೈಲ್ ಅಂಗಡಿಗೆ ತೆರಳಿ  ಗಾಬರಿ ಸೃಷ್ಟಿಸಿದ ಯುವಕ ಪೆರಿಂಜೆ ಸಮೀಪದ ಬಡಕೋಡಿಯ ರಾಜೇಶನಿಗೆ ಕತ್ತಿ ನೀಡಿರುವವನೆನ್ನಲಾದ ಕೋಟೆಬಾಗಿಲಿನ ಸಂದೇಶನನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಮೊಬೈಲ್ ಅಂಗಡಿಗೆ ನುಗ್ಗಿ ಸಿಬ್ಬಂದಿಗಳಿಗೆ ತಲವಾರು ಬೀಸಿ ಶೋ ನಡೆಸಿದ ಈತನನ್ನು ಮೊಬೈಲ್ ಅಂಗಡಿಯ ಹುಡುಗರೇ ಉಪಾಯದಿಂದ ಲಾಕ್ ಮಾಡಿ ಪೊಲೀಸರಿಗೊಪ್ಪಿಸಿ ಧೈರ್ಯ ತೋರಿದ್ದಾರೆ.

ವಿಚಾರಣೆಯ ವೇಳೆ ಆತ ತಾನು ವಾಮದಪದವಿನವನಾಗಿದ್ದು  ಪ್ರಸ್ತುತ ಪೆರಿಂಜೆಯ ಬಡಕೋಡಿ ಎಂಬಲ್ಲಿ ವಾಸವಿರುವುದಾಗಿ ತಿಳಿಸಿದ್ದಾನೆ ‌. ತನಗೆ ಕೋಟೆಬಾಗಿಲಿನ ಸಂದೇಶ್ ಎಂಬಾತ ತಲವಾರು ನೀಡಿರುವುದಾಗಿ ತಿಳಿಸಿದ್ದಾನೆಂದು ತಿಳಿದು ಬಂದಿದೆ.

 ಈ ಹಿನ್ನೆಲೆಯಲ್ಲಿ ಸಂದೇಶನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡರಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article