ಸಿವಿಲ್ ಇಂಜಿನಿಯರ್ ಸತೀಶ್ ಹೆಗ್ಡೆ ನಿಧನ
Saturday, July 25, 2026
ಮೂಡುಬಿದಿರೆ: ತಾಲ್ಲೂಕಿನಲ್ಲಿ ಸುಮಾರು ಎರಡು ದಶಕಗಳ ಕಾಲ ಸಿವಿಲ್ ಇಂಜಿನಿಯರಾಗಿ ಸೇವೆ ಸಲ್ಲಿಸಿದ್ದ ಬೆಳ್ತಂಗಡಿ ತಾಲ್ಲೂಕಿನ ಆಳದಂಗಡಿ ಗ್ರಾಮದ ನಾವೂರಗುತ್ತು ಸತೀಶ್ ಹೆಗ್ಡೆ(57)ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಸಿವಿಲ್ ಇಂಜಿನಿಯರಾಗಿದ್ದ ಅವರು ವಾಣಿಜ್ಯ ಬ್ಯಾಂಕ್ ಗಳಿಗೆ ಹಾಗು ಸಹಕಾರಿ ಸಂಘ, ಸಂಸ್ಥೆಗಳಿಗೆ ಕನ್ಸಲ್ಟೆಂಟ್ ಇಂಜಿನಿಯರಾಗಿದ್ದರು.
ಹಳೆ ಸೆಂಟ್ರಲ್ ಕಫೆ ಕಟ್ಟಡದಲ್ಲಿ ಕಚೇರಿ ಹೊಂದಿದ್ದರು. ತನ್ನ ಸರಳ ವ್ಯಕ್ತಿತ್ವ ಹಾಗು ವೃತ್ತಿ ಪ್ರಾಮಾಣಿಕತೆಯಿಂದಾಗಿ ಜನಮನ್ನಣೆಗಳಿಸಿದ್ದರು.
ಅವರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.