ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂಧನ ಖಂಡಿಸಿ: ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ನಿಂದ ಪ್ರತಿಭಟನೆ
ಕೆಪಿಸಿಸಿ ಕಾಯ೯ದಶಿ೯ ಮಿಥುನ್ ರೈ ಅವರು ಮಾತನಾಡಿ, ನೀಟ್ ಪರೀಕ್ಷೆಯಿಂದ ಅನ್ಯಾಯವಾಗಿದೆ ಎಂದು ಯುವ ಸಮುದಾಯವು ಆರೋಪಿಸಿ ದೆಹಲಿಯ ಜಂತರ್-ಮಂತರ್ ನಲ್ಲಿ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದೆ. ಕಳೆದ ಏಳು ವಷ೯ಗಳಲ್ಲಿ ಹಲವು ಬಾರಿ ನೀಟ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರುವ ಬಿಜೆಪಿ ಸರಕಾರವನ್ನು ಖಂಡಿಸಿದ ಅವರು ದೇಶದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನ್ಯಾಯವೆಸಗಿದೆ. 23 ವಿದ್ಯಾಥಿ೯ಗಳ ಕೊಲೆಗೆ ಕಾರಣವಾಗಿರುವ ಶಿಕ್ಷಣ ಮಂತ್ರಿ ಧಮೇ೯ಂದ್ರ ಪ್ರಧಾನ್ ಅನ್ಯಾಯವನ್ನು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ ವಿದ್ಯಾರ್ಥಿಗಳ ಮೇಲೆ ಮತ್ತು ಬೆಂಬಲ ಸೂಚಿಸಿದ ಸೋನಂ ವಾಕ್ಚು ಮೇಲೆ ಮೋದಿ ಸರಕಾರವು ಸರ್ವಾಧಿಕಾರಿಯಂತೆ ಹಿಂಸೆ ನೀಡುತ್ತಿದೆ, ನಮ್ಮ ನಾಯಕರನ್ನೂ ಬಂಧಿಸಲಾಗಿದೆ, ವಿದ್ಯಾರ್ಥಿಗಳ ಬೇಡಿಕೆಗೆ ಕೇಂದ್ರ ಸರಕಾರವು ಸ್ಪಂದಿಸಬೇಕು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು. ಹಿಟ್ಲರ್ ನಂತೆ ಸರ್ವಾಧಿಕಾರಿಯಂತೆ ವರ್ತಿಸುವ ಮೋದಿ ಸರಕಾರದ ಕೊನೆಗಾಲ ಸಮೀಪಿಸುತ್ತಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ನಗರ ಕಾಂಗ್ರೆಸ್ ಅಧ್ಯಕ್ಷ ಜೊಸ್ಸಿ ಮಿನೇಜಸ್, ಮೂಡುಬಿದಿರೆ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ,ಪ್ರಮುಖರಾದ ಸುರೇಶ್ ಪ್ರಭು, ಚಂದ್ರಹಾಸ ಸನಿಲ್,ರುಕ್ಕಯ್ಯ ಪೂಜಾರಿ, ರಮೇಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಇಕ್ಬಾಲ್ ಕರೀಮ್, ಟಿ.ಎನ್.ಕೆಂಬಾರೆ, ಸತೀಶ್ ಕೋಟ್ಯಾನ್, ರೆಕ್ಸನ್ ಪಿಂಟೊ, ಪ್ರವೀಣ್ ಇರುವೈಲ್, ಕುಮಾರ್ ಪೂಜಾರಿ, ಪ್ರದೀಪ್ ಇರುವೈಲ್, ದಿನೇಶ್ ಪ್ರಭು ಇರುವೈಲ್, ಪ್ರಶಾಂತ್ ಅಮೀನ್,ಸವಿತಾ ಟಿ.ಎನ್, ದಿಲೀಪ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ಹರೀಶ್ ಆಚಾರ್ಯ, ಪುರುಷೋತ್ತಮ ನಾಯಕ್,ಅನೀಶ್ ಡಿಸೋಜ,ಪಿ.ಕೆ.ಥೋಮಸ್, ಕೊರಗಪ್ಪ, ವಲೇರಿಯನ್ ಸಿಕ್ವೇರಾ, ಶೇಖರ್ ಬೊಳ್ಳಿ, ಸತೀಶ್ ಭಂಡಾರಿ,ಸುರೇಶ್ ಕೋಟ್ಯಾನ್, ವರುಣ್, ಲತೀಫ್,ಅಶ್ರಫ್ ಮರೋಡಿ, ಸಲಾಮ್ ಹೊಸಂಗಡಿ,ಗಣೇಶ್ ಶೆಟ್ಟಿ, ಶಾಬಾಝ್ ಬೆಳುವಾಯಿ, ಹಿಮಾಯತ್, ಮತ್ತಿತರರು ಉಪಸ್ಥಿತರಿದ್ದರು.
ಜೈಸನ್ ಪಿರೇರಾ ಬೋರುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.
