ಜಾಗತಿಕ ಮಟ್ಟದ ಪ್ರತಿಷ್ಠಿತ ಎಸಿಸಿಎ ಪರೀಕ್ಷೆ: ಆಳ್ವಾಸ್ ವಿದ್ಯಾಥಿ೯ಗಳ ಗಮನಾಹ೯ ಸಾಧನೆ

ಜಾಗತಿಕ ಮಟ್ಟದ ಪ್ರತಿಷ್ಠಿತ ಎಸಿಸಿಎ ಪರೀಕ್ಷೆ: ಆಳ್ವಾಸ್ ವಿದ್ಯಾಥಿ೯ಗಳ ಗಮನಾಹ೯ ಸಾಧನೆ


ಮೂಡುಬಿದಿರೆ: ಆಳ್ವಾಸ್ ಕಾಲೇಜು (ಸ್ವಾಯತ್ತ), ಮೂಡುಬಿದಿರೆಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಪ್ರತಿಷ್ಠಿತ ಎಸಿಸಿಎ (ಅಸೋಸಿಯೇಷನ್ ಆಫ್ ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್–ಯುನೈಟೆಡ್ ಕಿಂಗ್‌ಡಮ್) ಜೂನ್–2026ರ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ.

ಸ್ಕಿಲ್ಸ್ ಲೆವೆಲ್‌ನ ಫೈನಾನ್ಷಿಯಲ್ ರಿಪೋರ್ಟಿಂಗ್ ವಿಷಯದಲ್ಲಿ ಅಮಿಕ್ಷಾ ಡಿ. ನಾಯಕ್, ಮೂಲ್ಯ ಐಶ್ವರ್ಯ, ಮೊಹಮ್ಮದ್ ಅರ್ಫಾಜ್, ಖದೀಜಾ ತನಾಝಾ, ಹಫೀಝಾ, ಶಾಜಿನ್ ಅಬ್ದುಲ್ ರಹಿಮಾನ್, ತೇಜಸ್ ಸಿ. ಜಿ., ಶೇಖ್ ಅಬ್ದುಲ್ ತನ್ಝೀಮ್, ಮೊಹಮ್ಮದ್ ನಾಫಿ, ಮೊಹಮ್ಮದ್ ಬಶೀರ್, ಲಿಯೋನಾ ಅವ್ರಿಲ್ ರೋಡ್ರಿಗಸ್ ಸೇರಿದಂತೆ ಒಟ್ಟು 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪ್ರೊಫೆಷನಲ್ ಲೆವೆಲ್‌ನ ಸ್ಟ್ರಾಟಜಿಕ್ ಬಿಸಿನೆಸ್ ರಿಪೋರ್ಟಿಂಗ್ ವಿಷಯದಲ್ಲಿ ಮೊಹಮ್ಮದ್ ಇಫಾಝ್, ನಿಶಾಂತ್ ಬಿ. ಪೂಜಾರಿ ಉತ್ತೀರ್ಣರಾಗಿದ್ದಾರೆ. ಅಡ್ವಾನ್ಸ್ಡ್ ಆಡಿಟ್ ಆ್ಯಂಡ್ ಅಶ್ಯುರೆನ್ಸ್ ವಿಷಯದಲ್ಲಿ ಅಲ್ಮಾಜ್ ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಎಸಿಸಿಎ ಅರ್ಹತೆ ಪಡೆದವರು ವಿಶ್ವದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು, ಆಡಿಟ್ ಸಂಸ್ಥೆಗಳು, ಹಣಕಾಸು ಸಲಹಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉತ್ತಮ ವೃತ್ತಿ ಅವಕಾಶಗಳನ್ನು ಪಡೆಯುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಲೆಕ್ಕಪತ್ರ, ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಎಸಿಸಿಎ ಅತ್ಯಂತ ಪ್ರತಿಷ್ಠಿತ, ಬೇಡಿಕೆಯ ವೃತ್ತಿಪರ ಅರ್ಹತೆಗಳಲ್ಲಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ವೃತ್ತಿಪರ ಶಿಕ್ಷಣವನ್ನು ನೀಡುವ ಮೂಲಕ ಲೆಕ್ಕಪತ್ರ, ಹಣಕಾಸು, ಲೆಕ್ಕಪರಿಶೋಧನಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಸಮರ್ಥ ವೃತ್ತಿಪರರನ್ನಾಗಿ ರೂಪಿಸುವಲ್ಲಿ ಆಳ್ವಾಸ್ ಕಾಲೇಜು ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್, ಎಸಿಸಿಎ (ಯುನೈಟೆಡ್ ಕಿಂಗ್‌ಡಮ್) ಕೋರ್ಸ್ ಸಂಯೋಜಕ ವಿಘ್ನೇಶ್ ಪ್ರಭು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article