ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿತಾ೯ಡಿ ಮಕ್ಕಿ ಪ್ರೌಢಶಾಲೆಯಲ್ಲಿ "ಸ್ವಾಸ್ಥ್ಯ ಸಂಕಲ್ಪ"

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಿತಾ೯ಡಿ ಮಕ್ಕಿ ಪ್ರೌಢಶಾಲೆಯಲ್ಲಿ "ಸ್ವಾಸ್ಥ್ಯ ಸಂಕಲ್ಪ"


ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿತಾ೯ಡಿ ವಲಯದ ಶಿತಾ೯ಡಿ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಸರಕಾರಿ ಪ್ರೌಢಶಾಲೆ ಮಕ್ಕಿ ಇದರ  ಸಂಯುಕ್ತ ಆಶ್ರಯದಲ್ಲಿ "ಸ್ವಾಸ್ಥ್ಯ ಸಂಕಲ್ಪ" ಕಾರ್ಯಕ್ರಮ ನಡೆಯಿತು. 

ಸಂಪನ್ಮೂಲ ವ್ಯಕ್ತಿ ದೇವಿಪ್ರಸಾದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳು ದುಶ್ಚಟಕ್ಕೆ ಹೇಗೆ ಬಲಿಯಾಗುತ್ತಾರೆ ಮತ್ತು ಅವರನ್ನು  ದುಶ್ಚಟಗಳಿಂದ ಹೇಗೆ ದೂರ ಇರಿಸಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ ಅವರು ಮಾತನಾಡಿ ಧರ್ಮಸ್ಥಳ ಯೋಜನೆಯಿಂದ ಇಂತಹ ಕಾರ್ಯಕ್ರಮ ನಡೆಸುವುದರಿಂದ ಮಕ್ಕಳಿಗೆ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಯವರಿಗೆ ಅನುಕೂಲ ಆಗುತ್ತದೆ ಎಂದರು. 

ಒಕ್ಕೂಟದ ಅಧ್ಯಕ್ಷ ಜಯಾನಂದ, ವಲಯದ ಮೇಲ್ವಿಚಾರಕಿ ಪುಷ್ಪ, ಶಾಲಾ ಸಹ ಶಿಕ್ಷಕಿಯರು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಸೇವಾ ಪ್ರತಿನಿಧಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article