ನೀಟ್ ಸಾಧಕ ವಿದ್ಯಾರ್ಥಿಗಳಿಗೆ ಎಕ್ಸಲೆಂಟ್‌ನಲ್ಲಿ ಸನ್ಮಾನ

ನೀಟ್ ಸಾಧಕ ವಿದ್ಯಾರ್ಥಿಗಳಿಗೆ ಎಕ್ಸಲೆಂಟ್‌ನಲ್ಲಿ ಸನ್ಮಾನ


ಮೂಡುಬಿದಿರೆ: 500ಕ್ಕೂ ಅಧಿಕ ಅಂಕ ಗಳಿಸಿದ ನೀಟ್ ಸಾಧಕ ವಿದ್ಯಾಥಿ೯ಗಳಿಗೆ ಎಕ್ಸಲೆಂಟ್ ಪಿಯು ಕಾಲೇಜಿನ ರಾಜಸಭಾಂಗಣದಲ್ಲಿ ಭಾನುವಾರ ನಡೆದ ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು. 

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರು ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಕೇವಲ ಎಸ್‌ಎಸ್‌ಎಲ್‌ಸಿ ಅಂಕಗಳ ಆಧಾರದ ಮೇಲೆ ಅಳೆಯಲು ಸಾಧ್ಯವಿಲ್ಲ. ಸೂಕ್ತ ಮಾರ್ಗದರ್ಶನ, ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆ ಹಾಗೂ ನಿರಂತರ ಪ್ರೋತ್ಸಾಹ ದೊರೆತರೆ ಸಾಮಾನ್ಯ ವಿದ್ಯಾರ್ಥಿಯೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದು  ಹೇಳಿದರು.

600ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪೈಕಿ ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 75 ಶೇ. ಅಂಕ ಪಡೆದ ವಿದ್ಯಾರ್ಥಿಯೊಬ್ಬರು ನೀಟ್‌ನಲ್ಲಿ 580 ಅಂಕ ಗಳಿಸಿದ್ದು, ಮತ್ತೊಬ್ಬ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿಯಲ್ಲಿ 80 ಶೇ. ಅಂಕ ಪಡೆದು ನೀಟ್‌ನಲ್ಲಿ 611 ಅಂಕ ಗಳಿಸಿದ್ದಾನೆ. ವಿದ್ಯಾರ್ಥಿಗಳ ಹಿಂದಿನ ಅಂಕಗಳನ್ನು ನೋಡುವುದಕ್ಕಿಂತ ಅವರೊಳಗಿನ ಸಾಮರ್ಥ್ಯವನ್ನು ಗುರುತಿಸಿ ಸಾಧನೆಯಾಗಿ ರೂಪಿಸುವ ಕೆಲಸವನ್ನು ಎಕ್ಸಲೆಂಟ್ ಮಾಡುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಐಐಟಿಗೆ ಹಾಗೂ ಮೂವರು ಎನ್‌ಐಟಿಕೆ ಸುರತ್ಕಲ್‌ಗೆ ಆಯ್ಕೆಯಾಗಿರುವುದು ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಎಐಐಎಂಎಸ್‌, ಐಐಟಿ, ಎನ್‌ಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸಂಸ್ಥೆಗಳಿಗೆ ಎಕ್ಸಲೆಂಟ್ ವಿದ್ಯಾರ್ಥಿಗಳು ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ ಎಂದರು.

ಈ ವರ್ಷದ ಪಿಯುಸಿ ಬ್ಯಾಚ್‌ಗೆ ಪ್ರವೇಶ ಪಡೆದಾಗ ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 200 ಇದ್ದರೆ, ಎರಡು ವರ್ಷಗಳ ಬಳಿಕ ಸುಮಾರು 1,000 ವಿದ್ಯಾರ್ಥಿಗಳ ಪೈಕಿ 800ಕ್ಕೂ ಹೆಚ್ಚು ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಇದು ಶಿಕ್ಷಣ ವ್ಯವಸ್ಥೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಶಿಕ್ಷಣ ವ್ಯವಸ್ಥೆ ಹಾಗೂ ಶಿಸ್ತುಬದ್ಧ ನಿಯಮಗಳಿಗೆ ಪೋಷಕರು ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು.

ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯಲ್ಲಿ ಅವರ ಪರಿಶ್ರಮದ ಜೊತೆಗೆ ಶಿಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸಮರ್ಪಿತ ಸೇವೆಯೂ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿದ ಚಿನ್ಮಯ್ ಜಿ. ಬೆಳ್ಳೂರು, ಶಿಕ್ಷಣ ಹಾಗೂ ಶಿಸ್ತಿಗೆ ಸಂಬಂಧಿಸಿದ ಕಟ್ಟುನಿಟ್ಟಿನ ಕ್ರಮಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಿವೆ ಎಂದರು. ತನ್ಮಯಿ ಎಂ. ಕೋಟಿ, ಕಾಲೇಜಿನಲ್ಲಿ ನಡೆಯುವ ಯೋಗ, ಧ್ಯಾನ ಹಾಗೂ ಇತರ ಚಟುವಟಿಕೆಗಳು ಶೈಕ್ಷಣಿಕ ಸಾಧನೆಗೆ ನೆರವಾಗಿವೆ ಎಂದು ತಿಳಿಸಿದರು. ಪೋಷಕರ ಪ್ರತಿನಿಧಿಯಾಗಿ ಸತೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಶಿಸ್ತು ಹಾಗೂ ಸಂಸ್ಕಾರ ರೂಪಿಸುವಲ್ಲಿ ಎಕ್ಸಲೆಂಟ್ ಆಡಳಿತ ಮಂಡಳಿ ಸಲ್ಲಿಸುತ್ತಿರುವ ಸೇವೆಯನ್ನು ಅಭಿನಂದಿಸಿದರು.

ನೀಟ್ ಪರೀಕ್ಷೆಯಲ್ಲಿ 500ಕ್ಕೂ ಅಧಿಕ ಅಂಕ ಗಳಿಸಿದ ನಿಖಿಲ್ ಎಸ್. ಎಸ್. (650), ತನ್ಮಯ್ ಎ. ಕೋಟಿ (647), ಚಿನ್ಮಯ್ ಜಿ. ಬೆಳ್ಳೂರು (629), ಹೇಮ ಯು. (620), ಈಶ್ವರ್ ಪುಂಡಲೀಕಪ್ಪ ಕೊಪ್ಪಳ (612), ಮೋಹಿತ್ ವೈ. ಪಿ. (611), ರಚನಾ ಎಸ್. ಎಮ್., ಜಗದೀಶ್ ಅಪ್ಪಯ್ಯಪ್ಪ, ಸಮೀಕ್ಷಾ ಎಮ್. ಎಸ್., ಯಶವಂತ್ ಕೆ., ಆದಿತ್ಯ ಬಾಬಾಸಾಬ್ ಚೌಗಲೆ, ನಿಶ್ಚಯ್ ಎಮ್., ಚೇತನ್ ಜಿ. ರಾಘವ್, ರಾಹುಲ್ ಪಿ. ಗೌಡ, ಗುರುಚರಣ್ ಎಮ್. ಶೆಟ್ಟಿ, ಪ್ರಣವ್ ಗೌಡ ಐ. ಎಸ್., ಸಂಕೀರ್ತನ್ ಕಟ್ಟಾ, ಮನನ್ ಎಸ್. ಗೌಡ, ಸಮರ್ಥ್ ಕೆ. ಎಸ್., ಶೋಧನ್ ಎಮ್. ಎಸ್., ಪೂರ್ವಿಕ ಆರ್., ಶ್ಯಾಮ್‌ಕಲ್ಯಾಣ್ ಬೆಣ್ಣೂರ್, ಮನೀತ್, ಅಮೂಲ್ಯ ಶಂಕರ್ ಮಿರ್ಜಿ, ತೇಜಲ್ ಎಸ್. ಸ್ವಾಮಿ, ಸಮರ್ಥ್ ಎಸ್., ಆದಿತ್ ರಾಜ್ ಎ., ಸಮೀರ ಎಮ್. ಆಚಾರ್ಯ, ಹಿಮವಂತ್ ಪಿ., ಕೋಮಲ ಎಸ್. ಕೆ., ನಿಹಾಲ್, ತರುಣಿಕಾ ಎಸ್. ಹಾಗೂ ವಿಸ್ಮಯ ವಿ. ಗೌಡ ಅವರನ್ನು ಸನ್ಮಾನಿಸಲಾಯಿತು.

ಪುಷ್ಪರಾಜ್ ಸ್ವಾಗತಿಸಿದರು. ರಾಮಮೂರ್ತಿ, ತೇಜಸ್ವಿ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article