ರೋಟರಿ ಕ್ಲಬ್ ನಿಂದ ಗ್ಲಾಸ್ ಲೋಟ ವಿತರಣೆ
Thursday, July 23, 2026
ಮೂಡುಬಿದಿರೆ: ಮೂಡುಬಿದಿರೆ ರೋಟರಿ ಕ್ಲಬ್ ನ ಸಮಾಜ ಸೇವಾ ಕಾರ್ಯದ ಭಾಗವಾಗಿ ಮೂಡುಬಿದಿರೆಯಲ್ಲಿ ಪ್ಲಾಸ್ಟಿಕ್ ಲೋಟಗಳ ಬಳಕೆಯನ್ನು ಕಡಿಮೆಗೊಳಿಸುವಂತೆ ಜಾಗೃತಗೊಳಿಸಲು ರಸ್ತೆ ಪಕ್ಕದ ಸಣ್ಣ ಉದ್ಯಮದವರಿಗೆ 60 ಗ್ಲಾಸ್ ಗಳನ್ನು ವಿತರಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷರಾದ ಡಾ. ಆಶೀರ್ವಾದ ಎಂ. ಪಿ. ಹಿರಿಯ ಸದಸ್ಯರಾದ ಡಾ. ಹರೀಶ್ ನಾಯಕ್ ಮತ್ತು ಡಾ. ವಿನಯ ಕುಮಾರ್ ಹೆಗ್ಡೆ ಯವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭಹಾರೈಸಿದರು.