ಬಾಲಕಿಯರ ಹಾಸ್ಟೆಲ್‌ಗೆ ಶಾಸಕ ಅಶೋಕ್ ರೈ ದಿಢೀರ್ ಭೇಟಿ

ಬಾಲಕಿಯರ ಹಾಸ್ಟೆಲ್‌ಗೆ ಶಾಸಕ ಅಶೋಕ್ ರೈ ದಿಢೀರ್ ಭೇಟಿ


ಪುತ್ತೂರು: ಪುತ್ತೂರು ನಗರದ ಹೊರವಲಯದ ಬನ್ನೂರಿನಲ್ಲಿರುವ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ಅಲ್ಲಿನ ಸ್ವಚ್ಛತೆ ಮತ್ತು ಆಹಾರದ ವ್ಯವಸ್ಥೆಯನ್ನು ಪರಿಶೀಲಿಸಿದರು. 

ಕಾರ್ಯಕ್ರಮವೊಂದರ ಕಾರಣದಿಂದ ಬನ್ನೂರು ಗ್ರಾಮಕ್ಕೆ ಬಂದಿದ್ದ ಶಾಸಕರು ಬಾಲಕಿರ ಹಾಸ್ಟೆಲ್‌ಗೆ ಭೇಟಿ ನೀಡಿದರು. ಹಾಸ್ಟೆಲ್ ವಾರ್ಡನ್ ಜತೆಗೆ ಮಾತನಾಡಿ, ವಿದ್ಯಾರ್ಥಿನಿಯರಿಗೆ ನೀಡಲಾಗುವ ಆಹಾರದ ಬಗ್ಗೆ ಚರ್ಚಿಸಿದರು. ದಿನಕ್ಕೊಂದು ಬಗೆಯ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಉತ್ತಮವಾದ ಆಹಾರ ನೀಡಲಾಗುತ್ತಿದೆ ಎಂದು ವಾರ್ಡನ್ ತಿಳಿಸಿದರು.

ಸಾಂಬಾರು ಸವಿದ ಶಾಸಕರು:

ತಕ್ಷಣ ಅಡುಗೆ ಕೋಣೆಗೆ ಹೋದ ಶಾಸಕರು ಅಲ್ಲಿ ಮಧ್ಯಾಹ್ನಕ್ಕಾಗಿ ತಯಾರಿಸಿಟ್ಟಿದ್ದ ಆಹಾರ ಪರಿಶೀಲನೆ ಮಾಡಿದರು. ಅಲ್ಲಿರುವ ಸಾಂಬಾರು ಸವಿದ ಶಾಸಕರು ಮಕ್ಕಳಿಗೆ ಇದೇ ರೀತಿ ಉತ್ತಮ ಆಹಾರ ಕೊಡಬೇಕು. ಯಾವುದೇ ಕೊರತೆ ಆಗಬಾರದು. ವ್ಯವಸ್ಥೆಯಲ್ಲಿ ತೊಂದರೆಯಾದರೆ ತಕ್ಷಣ ನನ್ನ ಗಮನಕ್ಕೆ ತರಬೇಕು. ಸಾಂಬಾರು ತುಂಬಾ ಚೆನ್ನಾಗಿದೆ ಎಂದು ಶ್ಲಾಘಿಸಿದರು. 


ಬನ್ನೂರು ಹಾಸ್ಟೆಲ್‌ಗೆ ಭೇಟಿ ಮಾಡಿ ಇಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದೆ. ತಯಾರಿಸಿಟ್ಟಿದ್ದ ಆಹಾರ ಚೆನ್ನಾಗಿದೆ. ಸರ್ಕಾರದ ವ್ಯವಸ್ಥೆ ಚೆನ್ನಾಗಿದೆ ಎಂಬುವುದಕ್ಕೆ ಇಲ್ಲಿನ ಶುಚಿತ್ವ ಮತ್ತು ಆಹಾರದ ವ್ಯವಸ್ಥೆ ತಿಳಿಸುತ್ತಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ಕಾರಿ ಸ್ವಾಮ್ಯದ ಎಲ್ಲಾ ಹಾಸ್ಟೆಲ್, ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಬಾರದು. ಉತ್ತಮ ಆಹಾರದ ಕೊರತೆ ಆಗಬಾರದು. -ಅಶೋಕ್ ರೈ, ಶಾಸಕರು ಪುತ್ತೂರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article