ವಿದ್ಯುತ್ ಖಾಸಗೀಕರಣಕ್ಕೆ ರೈತಸಂಘ ಆಕ್ಷೇಪ: ಎಸಿಗೆ ಮನವಿ
ರಾಜ್ಯ ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣಗೊಳಿಸಿ ಟಾಟಾ ಕಂಪನಿಗೆ ನೀಡಲು ಮುಂದಾಗಿದೆ. ಇದರಿಂದ ಜನತೆ ಬಹಳಷ್ಟು ಸಂಕಷ್ಟು ಅನುಭವಿಸಲಿದ್ದಾರೆ. ರೈತರು, ಕೈಗಾರಿಕೆಗಳಿಗೆ, ಗ್ರಾಹಕರಿಗೆ, ನೌಕರರ ಭವಿಷ್ಯಕ್ಕೆ ಅಪಾಯವಿದೆ. ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಕಡಿತಗೊಳ್ಳಲಿದೆ. ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಲಿದ್ದಾರೆ. ಸರ್ಕಾರದ ಗೃಹಜ್ಯೋತಿ, ಭಾಗ್ಯಜ್ಯೋತಿ, ಗಂಗಾ ಕಲ್ಯಾಣ, ಸಣ್ಣ ಕೈಗಾರಿಕೆಗಳಿಗೆ ನೀಡುವ ಸಬ್ಸಿಡಿ ರದ್ದಾಗಲಿದೆ. ವಿದ್ಯುತ್ ದರ ಏರಿಕೆ ಮಾಡಿ ಆರ್ಥಿಕ ಹೊಡೆತ ಉಂಟಾಗಲಿದೆ.
ಖಾಸಗೀಕರಣದಿಂದ ಪಂಪ್‌ಸೆಟ್‌ಗಳ ಉಚಿತ ಬಿಲ್ 8-12ಕ್ಕೆ ಏರಿಕೆ ಆಗಲಿದೆ. 7 ಗಂಟೆ ನೀಡುವ ಫೇಟ್ ವಿದ್ಯುತ್‌ಗೆ ಹಣ ಪಾವತಿಸಬೇಕಾಗಬಹುದು. ದೊಡ್ಡ ದೊಡ್ಡ ಕಂಪನಿ, ಕೈಗಾರಿಕೆಗಳಿಗೆ ಆದ್ಯತೆ ನೀಡಿ ರೈತರನ್ನು ಕಡೆಗಣಿಸಬಹುದು, ಮೀಟರ್ ಟ್ರಾನ್ಸ್‌ಫಾರ್ಮರ್ ದುರಸ್ಥಿಗೆ ರೈತರೇ ಹಣ ಪಾವತಿಸಬೇಕಾಗಬಹುದು, ರೈತರು, ಜನ ಸಾಮಾನ್ಯರ ಮೂಲಭೂತ ಹಕ್ಕುಗಳಿಗೆ ಕೊಡಲಿಯೇಟು ಬೀಳಲಿದೆ.
ಉದ್ಯೋಗದ ಅಭದ್ರತೆ ಮತ್ತು ಗುತ್ತಿಗೆ ನೌಕರರ ಪದ್ದತಿ ಅಧಿಕವಾಗಿ ಕಲ್ಯಾಣ ಸೌಲಭ್ಯಗಳಿಗೆ ಧಕ್ಕೆಯಾಗುವ ಭೀತಿಯಿದೆ. ಖಾಸಗೀಕರಣದಿಂದ ಸರ್ಕಾರಕ್ಕೆ ಕಂಪನಿ ಮೇಲೆ ಯಾವುದೇ ಹಿಡಿತವಿಲ್ಲದೆ ಎಲ್ಲಾ ವರ್ಗದ ಜನರಿಗೆ ಸಮಸ್ಯೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣಕ್ಕೆ ಅವಕಾಶ ನೀಡದಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ರೈತರ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಗೌರವ ಸಲಹೆಗಾರ ಮಹಾಬಲ ಭಟ್, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ರೈತ ಸಂಘದ ಮುಖಂಡರಾದ ಶಿವಣ್ಣ ಗೌಡ ಇಡ್ಯಾಡಿ, ರಾಜೇಂದ್ರ ಇಡ್ಯಾಡಿ, ಶೇಖರ ರೈ ಕುಂಬ್ರ, ಶಿವಚಂದ್ರ ಈಶ್ವರಮಂಗಲ, ರಾಮಕೃಷ್ಣ ಅಡ್ಯಂತಾಯ, ಹರ್ಷಕುಮಾರ್ ಹೆಗ್ಡೆ, ಇಬ್ರಾಹಿಂ, ಇದಿನಬ್ಬ, ಸುದೀಶ್ ಶೆಟ್ಟಿ, ರಾಜೀವ ಗೌಡ, ಹರಿಣಾಕ್ಷಿ, ಗೀತಾ, ಗುಮ್ಮಣ್ಣ ಗೌಡ ನೆಲ್ಯಾಡಿ, ರಾಮಣ್ಣ ಶೆಟ್ಟಿ ಪಾಲಿಗೆ, ಕುಶಾಲಪ್ಪ ಗೌಡ ಪಂಜ, ಕೃಷ್ಣಪ್ಪ ಗೌಡ ಸಹಿತ ಹಲವು ಮಂದಿ ರೈತರು ಉಪಸ್ಥಿತರಿದ್ದರು.