ಫ್ಲ್ಯೂಟ್ಸ್ ನೋಂದಣಿ ಅಭಿಯಾನಕ್ಕೆ ಚಾಲನೆ

ಫ್ಲ್ಯೂಟ್ಸ್ ನೋಂದಣಿ ಅಭಿಯಾನಕ್ಕೆ ಚಾಲನೆ


ಶಿರ್ವ: ಬೆಳ್ಳೆ ಗ್ರಾ.ಪಂ. ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ  ಫ್ಲ್ಯೂಟ್ಸ್  ನೋಂದಣಿ ಅಭಿಯಾನ ಬೆಳ್ಳೆ ಗ್ರಾಮ ಪಂಚಾಯತ್‌ನ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗಿತು.  ಕಾರ್ಯಕ್ರಮವನ್ನು ಉಡುಪಿ ತಾ.ಪಂ. ಮಾಜಿ ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್  ಚಾಲನೆ ನೀಡಿ ಗ್ರಾಮ ಮಟ್ಟದಲ್ಲಿ ಈ ಕಾರ್ಯಕ್ರಮ ಮಾಡುವುದರಿಂದ  ಈ ಭಾಗದ ರೈತರಿಗೆ ಅನುಕೂಲವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.

ಗ್ರಾ.ಪಂ. ಆಡಳಿತಾಧಿಕಾರಿ ನಿಧಿಶ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ, ಕೃಷಿ ಇಲಾಖೆಯ ವಿದ್ಯಾನಂದ ಜೈನ್, ಪವಿತ್ರಾ, ಮಾಜಿ ಅಧ್ಯಕ್ಷೆ ದಿವ್ಯಾ ವಿ.ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಲೆ, ಎಂಬಿಕೆ ಶಿಲ್ಪಾ, ಕೃಷಿ ಸಖಿ ಪ್ರಮೋದಾ ಜೋಗಿ, ಪಂಚಾಯತ್ ಸಿಬ್ಬಂಧಿಗಳು ಭಾಗವಹಿಸಿದ್ದರು. ಬೆಳ್ಳೆ ಮತ್ತು ಕಟ್ಟಿಂಗೇರಿ ಗ್ರಾಮದ 200ಕ್ಕೂ ಅಧಿಕ ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article