ರೆಖ್ಯದಲ್ಲಿ ಗಿಡಗಳ ಪೋಷಣೆ ಹಾಗೂ ಗಿಡ ನಾಟಿ ಕಾರ್ಯಕ್ರಮ

ರೆಖ್ಯದಲ್ಲಿ ಗಿಡಗಳ ಪೋಷಣೆ ಹಾಗೂ ಗಿಡ ನಾಟಿ ಕಾರ್ಯಕ್ರಮ

ಕಳೆದ 40 ವರ್ಷಗಳಿಂದ ಸ್ವಚ್ಛತಾ ಕಾರ್ಯಕ್ರಮ, ಪಶ್ಚಿಮಘಟ್ಟ ಉಳಿಸಲು ಪ್ರಯತ್ನ: ಯಶೋಧರ್


ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಪರಿಸರ ಸಂರಕ್ಷಣೆಗೆ ಪೂರಕವಾಗಿ ನೀರಿಂಗಿಸುವಿಕೆ, ಜಲಾನಯನ ಕಾರ್ಯಕ್ರಮ, ಕಿಂಡಿ ಅಣೆಕಟ್ಟು ರಚನೆ, ಗಿಡಮರಗಳನ್ನು ಬೆಳೆಸುವುದು, ಸ್ವಚ್ಛತಾ ಕಾರ್ಯಕ್ರಮ, ಪಶ್ಚಿಮಘಟ್ಟ ಉಳಿಸಲು ಪ್ರಯತ್ನ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ಕಳೆದ 40 ವರ್ಷಗಳಿಂದ ನಡೆಸುತ್ತಾ ಬರಲಾಗಿದೆ ಎಂದು ಬೆಳ್ತಂಗಡಿ ತಾಲ್ಲೂಕು ಯೋಜನಾಧಿಕಾರಿ ಯಶೋಧರ್ ಹೇಳಿದರು.


ರೆಖ್ಯ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಲಾಗಿದ್ದ ಗಿಡ ನಾಟಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 


2021 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 1811 ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ 2,16,450 ಗಿಡಗಳನ್ನು 1351 ಹೆಕ್ಟೇರ್ ಕಾಡು ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ‘ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರ ಮೂಲಕ ವನಮಹೋತ್ಸವ, ಜಲಾನಯನ ಕಾರ್ಯಕ್ರಮ, ಕೆರೆಗಳ ಸುತ್ತಮುತ್ತ ಗಿಡನಾಡಿ, ಗಿಡ ಬಳ್ಳಿಗಳ ರಕ್ಷಣೆ, ಖಾಲಿ ಜಾಗದಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಿಡ ನಾಟಿ, ಸಾಲು ಮರ, ದೇವರ ಕಾಡು, ನದಿ ತೀರಗಳಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಉಪ್ಪಿನಂಗಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇವರು ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಗಿಡ ನಾಟಿ ಮಾಡುವುದು ಮಾತೃವಲ್ಲದೇ ಗಿಡಗಳ ಪೋಷಣೆಗೂ ಆದ್ಯತೆ ನೀಡುತ್ತಿದ್ದಾರೆ. ಶೌರ್ಯ ಘಟಕದ ಸದಸ್ಯರಾದ ಚೇತನ್ ಇವರು ಕಳೆದ ಐದು ವರ್ಷಗಳ ಹಿಂದೆ ನಾಟಿ ಮಾಡಿದ್ದ ಸುಮಾರು 150 ಗಿಡಗಳನ್ನು ಇಂದಿಗೂ ಪೋಷಣೆ ಮಾಡಿಕೊಂಡು ಬಂದಿದ್ದು ಇಂದು ನಾಟಿ ಮಾಡಿದ ಎಲ್ಲಾ ಗಿಡಗಳ ಬುಡಗಳನ್ನು ಸ್ವಚ್ಚಗೊಳಿಸಿ ಗೊಬ್ಬರ ಹಾಕುವ, ಅನಗತ್ಯ ಗಿಡಗಂಟಿಗಳನ್ನು ತೆರವು ಮಾಡುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸವನ್ನು ಎಲ್ಲರೂ ಮಾಡಬೇಕು. ಅರಣ್ಯ ಸಂರ್ವಕ್ಷಣೆಗೆ ಕೊಡುಗೆ ನೀಡಬೇಕು ಎಂದರು. 

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಕೃಷ್ಣಪ್ಪ, ಬೇಬಿ ಕಿರಣ್, ದನಂಜಯ ಶಿಬರಾಜೆ, ಗ್ರಾಮದ ಹಿರಿಯರಾದ ಆನಂದ ಗೌಡ, ಒಕ್ಕೂಟದ ಅಧ್ಯಕ್ಷ ರವೀಂದ್ರ, ಮೇಲ್ವಿಚಾರಕರಾದ ಪ್ರಿಯಾ, ಬೆಳ್ತಂಗಡಿ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಘಟಕದ ಸಂಯೋಜಕರಾದ ರಶ್ಮಿತಾ, ಘಟಕ ಪ್ರತಿನಿಧಿ ಆನಂದ್, ಶಿಶಿಲ ಅರಶಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸ್ವಯಂಸೇವಕರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.  

ಈ ಕಾರ್ಯಕ್ರಮದಲ್ಲಿ ಐದು ವರ್ಷದ ಹಿಂದೆ ನಾಟಿ ಮಾಡಲಾಗಿದ್ದ 150 ಗಿಡಗಳ ರಕ್ಷಣೆ, ಬುಡ ಮಾಡುವುದು, ಗೊಬ್ಬರ ಹಾಕುವುದು, ಅನಗತ್ಯ ಗಿಡಗಂಟಿಗಳನ್ನು ತೆರವು ಮಾಡುವುದರ ಜೊತೆಗೆ ಹೊಸದಾಗಿ ಹಣ್ಣು ಹಂಪಲುಗಳ ಗಿಡಗಳನ್ನು ಅರಣ್ಯದ ಅಂಚಿನಲ್ಲಿ ನಾಟಿ ಮಾಡಲಾಯಿತು.


ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯದಾದ್ಯಂತ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದ ಅಡಿಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾಡು ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವಂತೆ ಹಣ್ಣು ಹಂಪಲು ಗಿಡಗಳ ನಾಟಿ ಮಾಡಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕರು ಗಿಡ ನಾಟಿ ಮಾಡಲು ಯೋಗ್ಯವಾದ ರೈತರ ಜಮೀನಿಯ ವಿವರ ಮತ್ತು ಸಾರ್ವಜನಿಕ ಸ್ಥಳಗಳ ವಿವರವನ್ನು ಸಂಗ್ರಹಿಸುತ್ತಾರೆ.  ಗಿಡಗಳನ್ನು ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ನರ್ಸರಿಯಿಂದ ಪಡೆದುಕೊಂಡು ತಾಲೂಕಿನ ಅವಶ್ಯಕತೆಗೆ ಅನುಗುಣವಾಗಿ ನಾಟಿ ಮಾಡಲು ಗಿಡಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ 91 ತಾಲೂಕುಗಳಲ್ಲಿರುವ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ 10,470 ಸ್ವಯಂಸೇವಕರನ್ನು ಗಿಡನಾಟಿ, ಬೇಲಿ ರಚನೆ, ಪೋಷಣೆ, ಬೀಜ ಬಿತ್ತನೆಗೆ ಸದುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಸ್ವಯಂಸೇವರು ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. -ವಿವೇಕ್ ವಿ. ಪೈಸ್, ಪ್ರಾದೇಶಿಕ ನಿರ್ದೇಶಕರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article