ಬಟ್ಟಪ್ಪಾಡಿಯಲ್ಲಿ ತೀವ್ರಗೊಂಡ ಕಡಲಿನಬ್ಬರ
Sunday, July 12, 2026
ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿಯಲ್ಲಿ ಕಡಲಲಿನಬ್ಬರ ತೀವ್ರಗೊಂಡಿದ್ದು ಸ್ಥಳೀಯ ನಿವಾಸಿ ದಯಾವತಿ ಎಂಬವರ ಮನೆ ಅಪಾಯವನ್ನು ಎದುರಿಸುತ್ತಿದೆ.
ಕೆಲ ವರುಷಗಳ ಹಿಂದೆಯೇ ಉಚ್ಚಿಲ-ಬಟ್ಟಪ್ಪಾಡಿ ಸಂಪರ್ಕದ ಬೀಚ್ ರಸ್ತೆಯು ಕಡಲ್ಕೊರೆತಕ್ಕೆ ಸಮುದ್ರ ಪಾಲಾಗಿತ್ತು.ಸ್ಥಳೀಯ ಅನೇಕ ರೆಸಾರ್ಟ್ ಮತ್ತು ಮನೆಗಳು ಸಮುದ್ರದ ದೈತ್ಯಾಕಾರದ ಅಲೆಗಳಿಗೆ ಕೊಚ್ಚಿ ಹೋಗಿದ್ದವು.ಅಳಿದು ಉಳಿದ ಕೆಲ ಮನೆಗಳ ನಿವಾಸಿಗಳನ್ನ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.
ಬಟ್ಟಪ್ಪಾಡಿ ಪ್ರದೇಶದ ಮನೆಯೊಂದರಲ್ಲಿ ವೃದ್ಧೆ ದಯಾವತಿ ಎಂಬವರು ಒಂಟಿಯಾಗಿ ವಾಸಿಸುತ್ತಿದ್ದು,ಅವರ ಮನೆಯು ಕಡಲ್ಕೊರೆತಕ್ಕೆ ಆಹುತಿಯಾಗುವ ಭೀತಿ ಎದುರಾಗಿದೆ.