ಪೆಟ್ರೋಲ್ ಪಂಪ್ ನ ಸಿಬ್ಬಂದಿ ಮೇಲೆ ಹಲ್ಲೆ
ಉಳ್ಳಾಲ: ಕ್ಷುಲ್ಲಕ ಕಾರಣಕ್ಕೆ ಕಾರ್ ನಲ್ಲಿ ಬಂದ ತಂಡ ಪೆಟ್ರೋಲ್ ಪಂಪ್ ನ ಸಿಬ್ಬಂದಿ ಮೇಲೆ ಹಲ್ಲೆ ಗೈದ ಘಟನೆ ಇಲ್ಲಿನ ಠಾಣಾ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಸಮೀಪ ಸೋಮವಾರ ಬೆಳಗ್ಗಿನ ಜಾವ ನಡೆದಿದೆ.
ಹಲ್ಲೆಗೊಳಗಾದವರನ್ನು ಪೆಟ್ರೋಲ್ ಪಂಪ್ ಸಿಬ್ಬಂದಿ ಸನ್ನಿ, ಮೆನೇಜರ್ ಕೃಷ್ಣ ಎಂದು ಗುರುತಿಸಲಾಗಿದೆ.
ಪೆಟ್ರೋಲ್ ಪಂಪಿಗೆ ಕಾರಿನಲ್ಲಿ ಬಂದವರು ಕಾರ್ ಗೆ ಪೆಟ್ರೋಲ್ ಹಾಕಿದ ಬಳಿಕ ಕಾರನ್ನು ಅಲ್ಲಿಯೇ ಬದಿಯಲ್ಲಿ ನಿಲ್ಲಿಸಿದ್ದರು. ಈ ಕಾರ್ ನಲ್ಲಿ ಇಬ್ಬರು ಗಂಡಸರು ಹಾಗೂ ಇಬ್ಬರು ಹೆಂಗಸರು ಇದ್ದರು. ಸೋಮವಾರ ಬೆಳಗಿನ ಜಾವ ಸುಮಾರು 3.30 ಗಂಟೆ ವೇಳೆಗೆ ಈ ಪೈಕಿ ಇಬ್ಬರು ಗಂಡಸರು ಟಾಯ್ಲೆಟ್ ನ ವಿಚಾರದಲ್ಲಿ ಪೆಟ್ರೋಲ್ ಪಂಪ್ ನ ಸಿಬ್ಬಂದಿ ಸನ್ನಿ ಹಾಗೂ ಮೆನೇಜರ್ ಕೃಷ್ಣ ಶೆಟ್ಟಿ ಜೊತೆ ಗಲಾಟೆ ಮಾಡಿದಲ್ಲದೇ ಅವಾಚ್ಯ ಶಬ್ದಗಳಿಂದ ಬೈಯ್ದು ನಿಂದಿಸಿದ್ದಾರೆ. ಬಳಿಕ ಆರೋಪಿಗಳು ಮಾಲಕರ ಮತ್ತು ಮೆನೇಜರ್ ಅವರ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿ ಮೆನೇಜರ್ ಕೃಷ್ಣ ಹಾಗೂ ಸಿಬ್ಬಂದಿ ಸನ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಸಿಬ್ಬಂದಿ ಸನ್ನಿ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.