ಈಜು ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ
Thursday, August 20, 2026
ಬಂಟ್ವಾಳ: ಮಂಗಳೂರಿನ ಶಕ್ತಿ ಕಾಲೇಜಿನ ಈಜು ಕಾಲದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಸ್ಫರ್ಧೆ 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ವಿಧ್ಯಾರ್ಥಿನಿ ಸಾನಿಕ ಆರ್.ಕೆ 200ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನ, 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಪಡೆದು ಬೆಂಗಳೂರಿನ ಥಣಿಸಂದ್ರ ದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ಈಕೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್‌ಪೆಕ್ಟರ್. ಬಿ.ಕೆ. ನಾಯ್ಕ್ ಮತ್ತು ಅಶೋಕ್ ದೇವಾಡಿಗರಿಂದ ತರಬೇತಿ ಪಡೆಯುತ್ತಿದ್ದಾರೆ.ರಾಜೇಶ್ ಕಿರಣ್ ಕಲ್ಲಡ್ಕ ಮತ್ತು ಪರಿಮಳ ಇವರ ಪುತ್ರಿ.