ಆಕ್ರಮ ಮರಳುಗಾರಿಕೆ: ಒಬ್ಬ ಸೆರೆ, ಟಿಪ್ಪರ್ ವಶ

ಆಕ್ರಮ ಮರಳುಗಾರಿಕೆ: ಒಬ್ಬ ಸೆರೆ, ಟಿಪ್ಪರ್ ವಶ


ಬೆಳ್ತಂಗಡಿ: ಇಂದಬೆಟ್ಟುವಿನ ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟಕ್ಕೆ ಸಿದ್ಧಪಡಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಓರ್ವನನ್ನು ಬಂಧಿಸಿ, ಎರಡು ಟಿಪ್ಪರ್ ಲಾರಿಗಳನ್ನು ಹಾಗೂ ಮರಳನ್ನು ವಶಕ್ಕೆ ಪಡೆದ ಘಟನೆ ಆ.18ರಂದು ಬೆಳಗಿನ ಜಾವ ಸುಮಾರು 4.45ರ ವೇಳೆಗೆ ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ, ಬೊಳ್ಳೂರುಬೈಲು ಪ್ರದೇಶದಲ್ಲಿ ನಡೆದಿದೆ.

ಖಚಿತ ಮಾಹಿತಿಯ ಮೆಲೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಮರಳುಗಾರಿಕೆಯಲ್ಲಿ ನಿರತರಾಗಿದ್ದವರು ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದು ಒಬ್ಬಾತ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಮಹಮ್ಮದ್ ಸುಹೈಲ್ ಎಂದು ಗುರುತಿಸಲಾಗಿದ್ದು, ಇತರರು ಪರಾರಿಯಾಗಿದ್ದಾರೆ.

ವಿಚಾರಣೆ ವೇಳೆ ಪರಾರಿಯಾದ ಟಿಪ್ಪರ್ ಚಾಲಕನ ಹೆಸರು ಇಬ್ರಾಹಿಂ ಹಾಗೂ ಮರಳು ತುಂಬಿಸುತ್ತಿದ್ದವರಲ್ಲಿ ಪುನೀತ್ ಎಂಬಾತನ ಹೆಸರನ್ನು ಆತ ತಿಳಿಸಿದ್ದಾನೆ ಹಾಗೂ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯಾವುದೇ ಸರ್ಕಾರಿ ಪರವಾನಗಿ ಹೊಂದಿಲ್ಲವೆಂದು ಆರೋಪಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ KA-19-AA-2826 ನೋಂದಣಿ ಸಂಖ್ಯೆಯ ಟಿಪ್ಪರ್ನಲ್ಲಿ ಸುಮಾರು 10,000 ರೂ. ಮೌಲ್ಯದ ಮರಳು ಪತ್ತೆಯಾಗಿದ್ದು, ಟಿಪ್ಪರ್ನ ಅಂದಾಜು ಮೌಲ್ಯ 3.50 ರೂ. ಲಕ್ಷ ಎಂದು ಅಂದಾಜಿಸಲಾಗಿದೆ. ಮತ್ತೊಂದು ಏಂ-18-B-1236 ಟಿಪ್ಪರ್ನಲ್ಲಿ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಯಷ್ಟು ಅಂದಾಜು ೪೦೦ ರೂ. ಮೌಲ್ಯದ ಮರಳು ಪತ್ತೆಯಾಗಿದೆ. ಟಿಪ್ಪರ್ನ ಅಂದಾಜು ಮೌಲ್ಯ 4 ಲಕ್ಷ ರೂ. ಎನ್ನಲಾಗಿದ್ದು ಎರಡು ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 89/2026ರಂತೆ BNS-2023ರ ಕಲಂ 303(2) ಜೊತೆಗೆ 3(5), MMDR Act ಹಾಗೂ KMMCR-1994ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article