ಪತ್ರಕರ್ತರ ‌ಮೇಲಿನ ಹಲ್ಲೆ ಖಂಡಿಸಿ, ಆರೋಪಿ ಬಂಧನಕ್ಕೆ ಆಗ್ರಹಿಸಿ ಡಿವೈಎಫ್ ಐ ಪ್ರತಿಭಟನೆ

ಪತ್ರಕರ್ತರ ‌ಮೇಲಿನ ಹಲ್ಲೆ ಖಂಡಿಸಿ, ಆರೋಪಿ ಬಂಧನಕ್ಕೆ ಆಗ್ರಹಿಸಿ ಡಿವೈಎಫ್ ಐ ಪ್ರತಿಭಟನೆ


ಕುಂದಾಪುರ: ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಲಂಚದ ಪ್ರಕರಣದ ಕುರಿತಾಗಿ ವರದಿ ಮಾಡಿದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ವೈದ್ಯ ಮಹೇಂದ್ರ ಶೆಟ್ಟಿ ನಡೆಸಿದ ಹಲ್ಲೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ತೀವ್ರವಾಗಿ ಖಂಡಿಸಿದೆ.  ಆರೋಪಿ ಡಾಕ್ಟರನ್ನು ಬಂಧಿಸಿ, ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಫೆಡರೇಶನ್ ಕುಂದಾಪುರ ತಾಲೂಕು ಸಮಿತಿ (ಡಿವೈಎಫ್ಐ) ವತಿಯಿಂದ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರಾದ ಸುರೇಶ್ ಕಲ್ಲಾಗರ ಅವರು, ಇಂತವರು ವೈದ್ಯ ವೃತ್ತಿಗೆ ಕಳಂಕ. ಕೂಡಲೇ ಆರೋಗ್ಯ ಸಚಿವರು ಇವರನ್ನು ವಜಾಗೊಳಿಸಿ, ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣ ಪಡೆಯುತ್ತಿರುವುದು ಉಚಿತ ಸೇವೆಗೆ ಕಪ್ಪು ಚುಕ್ಕೆ. ವೈದ್ಯರೊಬ್ಬರು ಈ ರೀತಿಯಾಗಿ ಪತ್ರಕರ್ತರಿಗೆ ಹಲ್ಲೆ ನಡೆಸಿರುವುದು ಅಕ್ಷಮ್ಯ ಅಪರಾಧ. ಇವರು ಮುಂದೆ ವೈದ್ಯ ವೃತ್ತಿಯಲ್ಲಿಯೇ ಮುಂದುವರಿಯಬಾರದು ಎಂದು ಮುಖಂಡರಾದ ಹೆಚ್. ನರಸಿಂಹ ಆಗ್ರಹಿಸಿದರು.

ಡಿವೈಎಫ್ಐ ಮಾಜಿ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, ಪತ್ರಿಕೋದ್ಯಮ ಸಮಾಜದ ನಾಲ್ಕನೇ ಕಂಬವಾಗಿದ್ದು, ಸಮಾಜದ ಓರೆಕೋರೆ ತಿದ್ದುವ ಕಾರ್ಯ ಮಾಡುತ್ತಿದೆ. ತಪ್ಪುಗಳನ್ನು ತೋರಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದೆ. ಇದು ಪತ್ರಿಕಾ ಧರ್ಮದ ಮೇಲಿನ ಹಲ್ಲೆಯಾಗಿದೆ. ಚಿಕಿತ್ಸೆಗೆ ಹಣ ಪಡೆಯುತ್ತಿರುವ ಆರೋಪ ನಿಜಕ್ಕೂ ಖಾಸಗಿ ಆಸ್ಪತ್ರೆಗಿಂತ ಕೀಳಾದ ನಡೆಯಾಗಿದೆ. ಇಂತವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರಗಿಸಬೇಕು. ಅಕ್ರಮ ಎಸಗಿದ ವೈದ್ಯರನ್ನು ಸಾರ್ವಜನಿಕ ಸೇವೆಯಿಂದ ತಕ್ಷಣ ವಜಾಗೊಳಿಸಬೇಕು. ಕೂಡಲೇ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಡಿವೈಎಫ್ ಐ ಮುಖಂಡರಾದ ಗಣೇಶ್ ದಾಸ್, ರಾಜ ಬಿಟಿಆರ್, ರವಿ ವಿಎಂ, ಮಂಜುನಾಥ್ ಶೋಗನ್, ಉದಯ ಟೈಲರ್, ಸಂಪತ್ ಕುಮಾರ್, ಚಂದ್ರ ಬಿಟಿಆರ್, ಗಣೇಶ ಕಲ್ಲಾಗರ, ರಾಜೀವ ಪಡುಕೋಣೆ, ಸಂತೋಷ್ ಹೆಮ್ಮಾಡಿ, ರಾಘವೇಂದ್ರ ದೋಣಿಮನೆ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article