ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ: ಆರೋಪಿ ಪೋಲೀಸರ ವಶ
Monday, August 24, 2026
ಕುಂದಾಪುರ: ಬ್ರಹ್ಮಾವರ ಬೈಕಾಡಿ ಗಾಂಧಿನಗರದಲ್ಲಿ ಜೋಡಿ ಕೊಲೆ ನಡೆದಿದೆ. ಶಾಯಿದ್ ಅಲಿ(25) ಎಂಬವನು ತನ್ನ ತಂದೆ ಮಹಮ್ಮದ್ ಅಲಿ ಹಾಗೂ ತಾಯಿ ಸಂಶದ್ ಬೇಗಂ ಎಂಬವರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ತಂದೆ ಮಲ್ಪೆಯಲ್ಲಿ ಮೀನು ಸಾಗಾಟ ವಾಹನದ ಡ್ರೈವರ್ ಆಗಿದ್ದಾರೆ.
ಶಾಯಿದ್ ಅಲಿ ಜುಮೆಟೋ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು, ಆ ಕೆಲಸವನ್ನೂ ಸರಿಯಾಗಿ ಮಾಡದೆ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಹೆತ್ತವರೊಂದಿಗಿನ ಸಣ್ಣ ಜಗಳ ವಿಕೋಪಕ್ಕೇರಿ ಈ ದುರ್ಘಟನೆಯಲ್ಲಿ ಪರ್ಯವಸಾನಗೊಂಡಿದೆ.
ಭಾನುವಾರ ರಾತ್ರಿ ಕೊಲೆ ನಡೆಸಿರಬಹುದು ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸುತ್ತಿಗೆಯಲ್ಲಿ ಹೊಡೆದು ಕೊಂದಿದ್ದ ಎನ್ನಲಾಗುತ್ತಿದ್ದು ಈತನೇ ಪೋಲೀಸರಿಗೆ ಫೋನ್ ಮಾಡಿ ತಿಳಿಸಿದ್ದ!
ಆರೋಪಿ ಆಲಿ ಮಾದಕ ದ್ರವ್ಯ ಸೇವಿಸುವ ಹವ್ಯಾಸ ಹೊಂದಿದ್ದು, ಹಿಂದೊಮ್ಮೆ ಈ ಬಗ್ಗೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಈ ಕೊಲೆಯೂ ಮಾದಕ ದ್ರವ್ಯ ನಶೆಯಲ್ಲಿಯೇ ನಡೆದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೋಲೀಸರು ಸ್ಥಳಕ್ಕೆ ಆಗಮಿಸಿ ಅವನನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.