ಹೋಮ್ ನರ್ಸ್ ನಿಂದ ಮನೆಯವರ ಖಾತೆಗೇ ಕನ್ನ

ಹೋಮ್ ನರ್ಸ್ ನಿಂದ ಮನೆಯವರ ಖಾತೆಗೇ ಕನ್ನ

ಕುಂದಾಪುರ: ಅನಾರೋಗ್ಯ ಪೀಡಿತರ ಶುಶ್ರೂಷೆಗಾಗಿ ಮನೆಯಲ್ಲಿದ್ದ ಹೋಮ್ ನರ್ಸ್ ಮನೆಯವರ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿ ನಾಪತ್ತೆಯಾದ ಘಟನೆ ಬ್ರಹ್ಮಾವರ ತಾಲೂಕು ಸಾಯಿಬ್ರಕಟ್ಟೆಯ ಯಡ್ತಾಡಿ ಎಂಬಲ್ಲಿ ನಡೆದಿದೆ. ಈ ಬಗ್ಗೆ  ಯಡ್ತಾಡಿಯ ಭಾಗ್ಯಲಕ್ಷ್ಮೀ ಎಂಬವರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ. 

ಪ್ರಕರಣದ ವಿವರ:

ಯಡ್ತಾಡಿ ನಿವಾಸಿ ಭಾಗ್ಯಲಕ್ಷ್ಮೀ ಎಂಬವರ ಗಂಡ ಶ್ರೀನಿವಾಸ ಪೂಜಾರಿ  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.  ಅವರ ಯೋಗಕ್ಷೇಮ ನೋಡಿಕೊಳ್ಳಲು ಉತ್ತಮ ಹೋಮ್‌ ನರ್ಸ್‌ ಬೇಕಾಗಿರುವುದರಿಂದ ಉಡುಪಿಯಲ್ಲಿರುವ ವಿ ಕೇರ್‌ ಹೋಮ್‌ ನರ್ಸ್‌ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಮುಂಗಡವಾಗಿ 28,000 ರೂ ಹಣ ನೀಡಿ ಹೋಮ್ ನರ್ಸ್ ನೇಮಕ ಮಾಡಿಕೊಂಡಿದ್ದರು. ಕಳೆದ ಜೂನ್ 25 ರಂದು  ವಿ ಕೇರ್‌ ಹೋಮ್‌ ನರ್ಸ್‌ ಸಂಸ್ಥೆಯವರು ಹೋಮ್‌ ಬ್ರದರ್‌ ಸಚಿನ್‌ ಎಂಬುವರನ್ನು  ಅವರ ಮನೆಗೆ ಬಂದು ಬಿಟ್ಟುಹೋಗಿದ್ದರು. ಬಳಿಕ ಸಚಿನ್‌  ದಿನಾಂಕ: 07.07.2026 ರಂದು ಅಗತ್ಯ ಕೆಲಸ ಇರುವುದಾಗಿ ಹೇಳಿ ತನ್ನ ಊರಿಗೆ ಹೋಗಿರುತ್ತಾನೆ. ದಿನಾಂಕ: 28.07.2026 ರಂದು ಭಾಗ್ಯಲಕ್ಷ್ಮಿಯವರ ಮಗಳು  ತಂದೆ ಶ್ರೀನಿವಾಸ ಪೂಜಾರಿಯವರ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ  ಹೋಮ್ ಬ್ರದರ್ ಸಚಿನ್‌, ಮನೆಯವರು ಮತ್ತು ಖಾತೆದಾರರ ಗಮನಕ್ಕೆ ಬಾರದೇ ಅವರ ಬ್ಯಾಂಕ್‌ ಆಫ್‌ ಬರೋಡಾ  ಖಾತೆಯಿಂದ ಅವರ ಮೊಬೈಲ್‌ನಲ್ಲಿ ಯುಪಿಐ ಮೂಲಕ ದಿನಾಂಕ: 25.06.2026 ರಿಂದ 07.07.2026 ರ ವರೆಗೆ ಹಂತ ಹಂತವಾಗಿ 1,60,500 ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡಿರುತ್ತಾನೆ. 

ಈ ಬಗ್ಗೆ ಉಡುಪಿಯಲ್ಲಿನ ವಿ ಕೇರ್‌ ಹೋಮ್‌ ನರ್ಸ್‌ ಸಂಸ್ಥೆಯಲ್ಲಿ ವಿಚಾರಿಸಿದಾಗ ತಮಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲವೆಂದು ಉಡಾಫೆಯಿಂದ ಮಾತನಾಡಿರುತ್ತಾರೆ.  ಸಚಿನ್‌ ರವರೊಂದಿಗೆ ವಿ ಕೇರ್‌ ಹೋಮ್‌ ನರ್ಸ್‌ ಸಂಸ್ಥೆಯವರು ಸೇರಿಕೊಂಡು ಪೂಜಾರಿಯವರ  ಬ್ಯಾಂಕ್‌ ಖಾತೆಯಿಂದ ಮೋಸದಿಂದ ಹಣವನ್ನು ವರ್ಗಾವಣೆ ಮಾಡಿಕೊಂಡು ನಂಬಿಕೆ ದ್ರೊಹ ಮಾಡಿರುತ್ತಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ:  143/2026 Us ಕಲಂ  316 (4) , 318 (2) BNS - 2023 ರಂತೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿರುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article