ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು ನೆಂಪು, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಅಂಗವಾಗಿ ಯೋಧರಾದ ಯೋಗೇಂದ್ರ ಸುವರ್ಣ ಹಾಗೂ ದಿನೇಶ್ ಅವರನ್ನು ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಗೌರವಿಸಲಾಯಿತು.
ನಿವೃತ್ತ ಯೋಧ ಯೋಗೇಂದ್ರ ಸುವರ್ಣ ಮಾತನಾಡಿ, ಕಾರ್ಗಿಲ್ ಎಂಬುದು ಒಂದು ಸ್ಥಳದ ಹೆಸರು ಅಂದು ಯೋಧರು ಟೈಗರ್ ಬೆಟ್ಟವನ್ನು ಹತ್ತಿದ ಸಂದರ್ಭದಲ್ಲಿ ಎದುರಾದ ಸಂಕಷ್ಟಗಳು ಅದೆಲ್ಲವನ್ನೂ ಮೆಟ್ಟಿ ನಿಂತು ದೇಶದ ರಕ್ಷಣೆಗಾಗಿ ಹೋರಾಡಿ ಮಾತೃಭೂಮಿಯ ತುತ್ತ ತುದಿಯಲ್ಲಿ ಭಾರತದ ಧ್ವಜವನ್ನು ಅರಳಿಸಿದ ಅದ್ಭುತ ರೋಮಾಂಚಕ ಅನುಭವವನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ಜು.೨೯ ರಂದು ನಡೆಯಲಿರುವ ಗುರು ಪೂರ್ಣಿಮೆಯ ಪ್ರಯುಕ್ತ ಇಂದು ಗುರುಗಳ ಶತಅಷ್ಟೋತ್ತರ ಪಠಿಸಿ ಪೂಜೆ ಸಲ್ಲಿಸಲಾಯಿತು. ನನ್ನ ಜೀವನದಲ್ಲಿ ನಾರಾಯಣ ಗುರುಗಳ ತೋರಿದ ದಾರಿ ಅವಿಸ್ಮರಣೀಯ ಎನ್ನುತ್ತಾ, ಆಟಿ ಎಂದರೆ ಹಿಂದಿನ ಕಾಲದಲ್ಲಿ ಒಲೆಗೆ ಬೆಂಕಿ ಹಾಕಲಾರದಷ್ಟು ಮಳೆಯ ಕಾಲ, ರೋಗರುಜಿನಗಳ ಕಾಲ, ಆಟಿ ಅಂದರೆ ಅನಿಷ್ಟ ಎಂದೇ ಹೇಳಲಾಗುತ್ತಿತ್ತು. ಆಟಿ ಸಮಯದಲ್ಲಿ ನಮ್ಮ ದೈವಗಳು ಘಟ್ಟಕ್ಕೆ ಹೋಗುವ ಕಾರಣ ನಮ್ಮ ರಕ್ಷಣೆಗಾಗಿ ಆಟಿ ಕಳಂಜ ನನ್ನು ಕಳುಹಿಸುತ್ತಾರೆ ಎಂಬುದು ನಂಬಿಕೆ. ಇಂದು ಆಟಿ ತಿಂಗಳಲ್ಲಿ ಬಗೆಬಗೆಯ ತಿಂಡಿ ತಿನಿಸುಗಳನ್ನು ತಿನ್ನುವ ಸಂಭ್ರಮ ಕಾಲ ಎಂದರು.
ಹಿಂದಿನ ಕಾಲದಲ್ಲಿ ದೇಶ ಕಾಯುವ ಸೈನಿಕರು ಮಾಡಿದ ತ್ಯಾಗವನ್ನು ನಾವು ಮರೆಯಬಾರದು ಯಾಕೆಂದರೆ ಇಂದು ಟಿವಿ ಇತರ ಮಧ್ಯಮದ ಮೂಲಕ ಎಲ್ಲವೂ ಕೂಡಲೇ ತಿಳಿಯುವುದು. ಆದರೆ ಅಂದು ಏನು ನಡೆಯುತ್ತಿತ್ತು ಎಂದು ನಮಗೆ ತಿಳಿಯುತ್ತೀರಲಿಲ್ಲ ಆದ್ದರಿಂದ ಪ್ರತಿಯೊಂದು ಯೋಧರಿಗೂ ಗೌರವ ಸಲ್ಲಿಸುತ್ತಾ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ ಎಂದರು. ಹಾಗೇನೆ ಯುವವಾಹಿನಿ ಸಂಸ್ಥೆಯ ಪ್ರತಿ ಘಟಕಗಳಲ್ಲಿ ವಿದ್ಯಾರ್ಥಿ ಪುರಸ್ಕಾರ ಕಾರ್ಯಕ್ರಮ ನಡೆಯುತ್ತದೆ ಆದರೆ ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಯುವವಾಹಿನಿ ಘಟಕಗಳಿಗೆ ಸೇರಿಸುವಂತ ಕೆಲಸ ಆಗಬೇಕು, ಮುಂದೆ ಅವರೆಲ್ಲರೂ ಯುವವಾಹಿನಿ ಸಂಸ್ಥೆಯ ಶಕ್ತಿಯಾಗಬಲ್ಲರು ಎಂದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳಿಸಿದ ಘಟಕದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಹಾಗೂ ಇತರ ಘಟಕಗಳ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನೀತಾ ಅಳಪೆ ಪ್ರಾಥಿಸಿದರು. ಪೂರ್ಣಿಮಾ ಯು.ಆರ್. ಸ್ವಾಗತಿಸಿದರು. ದಿನೇಶ್ ಕಂದಾವರ ವಂದಿಸಿ, ಸತೀಶ್. ಕೆ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಆಟಿಯ ಬಗೆಬಗೆಯ ತಿಂಡಿತಿನಸುಗಳ ಅಯೋಜನೆ ಮಾಡಲಾಗಿತ್ತು.

