ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾತ್ಮರನ್ನು ಸ್ಮರಿಸಬೇಕು: ನಿವೃತ್ತ ಕರ್ನಲ್ ಎ.ಕೆ. ಜಯಚಂದ್ರನ್
ವಳಚ್ಚಿಲ್ ಎಕ್ಸ್‌ಪರ್ಟ್ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಸ್ವಾತಂತ್ರ್ಯ ಎಂಬುದು ಒಂದೇ ದಿನದಲ್ಲಿ ದೊರೆತಿಲ್ಲ. ನಮ್ಮ ಸೈನಿಕರು ಹಬ್ಬಹರಿದಿನಗಳ ಆಚರಣೆಗಳನ್ನು ತ್ಯಾಗ ಮಾಡಿ ದೇಶದ ರಕ್ಷಣೆಗಾಗಿ ಸತತವಾಗಿ ಇಂದಿಗೂ ಹೋರಾಡುತ್ತಿದ್ದಾರೆ. ಆದರೆ ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಿದೆ. ಕೇವಲ ಅನುಕೂಲಗಳನ್ನು ಅನುಭವಿಸುವುದು ಮಾತ್ರವಲ್ಲ, ನೀವೇ ಉದ್ಯಮಶೀಲರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ಸಂಸತ್ತಿನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ಮಹಾತ್ಮರನ್ನು ನಾವು ಸ್ಮರಿಸಬೇಕು. 80ನೇ ಸ್ವಾತಂತ್ರ್ಯ ದಿನಾಚರಣೆ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ಭವಿಷ್ಯದಲ್ಲಿ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಒಲಿಂಪಿಯಾಡ್ ರಾಷ್ಟ್ರೀಯ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿ ವಿವಾನ್ ಎ. ಗುಡದಿನ್ನಿ ಇವರಿಗೆ ಬಹುಮಾನ ವಿತರಿಸಲಾಯಿತು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪಿ ದೀಪಿಕಾ ಎ. ನಾಯಕ್, ಉಪಪ್ರಾಂಶುಪಾಲೆ (ಆಡಳಿತ) ಧೃತಿ ವಿ ಹೆಗ್ಡೆ, ಕಾರ್ಯಕ್ರಮ ನಿರ್ದೇಶಕ ಸುರೇಶ ಎಡನಾಡು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳ ಆಯ್ಕೆ:
ವಿದ್ಯಾರ್ಥಿ ಸಂಸತ್ತಿನ ಶ್ರೇಯಸ್ ಬಿ ರೇವಣ್ಣನವರ್(ಅಧ್ಯಕ್ಷ), ಕಾರ್ಯದರ್ಶಿ ಪೂಜಿತ ಎನ್, ನಿಶಾ ಶಶಿಧರ್ ಶಿಂಗೆ (ಜಂಟಿ ಕಾರ್ಯದರ್ಶಿ), ವಿವಾನ್ ಎ. ಗುಡದಿನ್ನಿ (ಜಂಟಿ ಕಾರ್ಯದರ್ಶಿ) ಮತ್ತು ವೀರ ಅರುಣ್ ಕುಮಾರ್ ಜಮದಾದೆ (ಶಿಸ್ತು), ಅಬಿಧ್ಯು ಮಹೇಶ್ ಗುಬ್ಬಿ (ಶಿಸ್ತು), ಸದಸ್ಯರಾಗಿ ಸಾನ್ವಿ ಎಸ್. ಗೌಡ, ಸುಮುಖ್ ಎಮ್. (ರಿಕ್ರಿಯೇಷನ್ ಮತ್ತು ಈವೆಂಟ್ ನಾಯಕರು), ಶ್ರೀಯ ಸಿ.ಪಿ. ಮತ್ತು ಕರೀಂ ಶರೀಫ್ ಎಮ್ (ಹಾಸ್ಟೆಲ್ ನಾಯಕರು) ಅವರನ್ನು ಆಯ್ಕೆಮಾಡಲಾಯಿತು.
ವಿದ್ಯಾರ್ಥಿಗಳಾದ ಶಶಾಂಕ್ ಪಿ.ಟಿ. ಸ್ವಾಗತಿಸಿದರು. ಅಮೃತ ಸುನಿಲ್ ಕುಮಾರ್ ಮುಮ್ಮಿಗಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ಸುಬ್ರಹ್ಮಣ್ಯ ಉಡುಪ ಅವರು ವಂದಿಸಿದರು.
ವಿದ್ಯಾರ್ಥಿಗಳು ಹಾಡಿದ ದೇಶಭಕ್ತಿ ಗೀತೆಯು ಗಮನ ಸೆಳೆಯಿತು. ಬಳಿಕ ಸಿಹಿ ತಿಂಡಿಯನ್ನು ವಿತರಿಸಲಾಯಿತು.

