ದಿನಪೂರ್ತಿ ಮೋಡ ಮೋಡ ಮಿಶ್ರೀತ ಬಿಸಿ ವಾತವಾರಣ

ದಿನಪೂರ್ತಿ ಮೋಡ ಮೋಡ ಮಿಶ್ರೀತ ಬಿಸಿ ವಾತವಾರಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಕ್ಷೀಣವಾಗಿದೆ. ಸೋಮವಾರ ದಿನಪೂರ್ತಿ ಮೋಡ ಮೋಡ ಮಿಶ್ರೀತ ಬಿಸಿ ವಾತವಾರಣ ಇದ್ದು, ಗ್ರಾಮಿಣ ಭಾಗದ ಹಲವಡೆ ಅಲ್ಪಸ್ವಲ್ಪ ಮಳೆಯಾಗಿದೆ.

ಮಂಗಳವಾರ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದೊಂದಿಗೆ ದಿನದಲ್ಲಿ ಒಂದೆರಡು ಸಣ್ಣ ಅವಧಿಯ ಸಮಾನ್ಯ ಮಳೆಯ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಒಂದೆರಡು ಮಳೆ ಹೆಚ್ಚಿರಬಹುದು. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆಗಳು ಕಡಿಮೆಯಾಗಿದ್ದು, ಮುಂದಿನ 10 ದಿನಗಳವರೆಗೂ ಅಲ್ಲಲ್ಲಿ ದಿನಕ್ಕೆ ಒಂದೆರಡು ಸಣ್ಣ ಅವಧಿಯ ಮಳೆಯ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 15 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಬಂಟ್ವಾಳದಲ್ಲಿ 19.5 ಮಿಮಿ ಮಿ.ಮೀ ಮಳೆಯಾಗಿದೆ. ಗಾಳಿಯ ಚಲನೆಯು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ಪಚ್ಚಿಮಘಟ್ದ  ಕೆಳಗಿನ ಪ್ರದೇಶಗಳಲ್ಲಿ ಮಳೆ ಹೆಚ್ಚಿರಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article