ರೋಹನ್ ಮೊಂತೆರೊ ಅವರಿಗೆ ಮಾತೃ ವಿಯೋಗ
Wednesday, August 19, 2026
ಮಂಗಳೂರು: ಮೂಡುಜೆಪ್ಪು, ಕೆಲರಾಯಿ ನಿವಾಸಿ ಹಾಗೂ ದಿವಂಗತ ಗಿಲ್ಬರ್ಟ್ ಮೊಂತೆರೊ ಅವರ ಧರ್ಮಪತ್ನಿ ಪ್ರೆಸಿಲ್ಲಾ ಮೊಂತೆರೊ (81) ಅವರು ಅಲ್ಪಕಾಲದ ಅಸ್ವಾಸ್ಥ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 19ರಂದು ನಿಧನರಾದರು.
ಪ್ರಗತಿಪರ ಕೃಷಿಕರು ಮತ್ತು ಪರೋಪಕಾರಿ ಸ್ವಭಾವದವರಾಗಿದ್ದ ಅವರು ನೆರೆಹೊರೆಯವರು ಹಾಗೂ ಪರಿಚಿತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಮೃತರು ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ಅವರ ತಾಯಿ. ರೋಹನ್ ಸೇರಿ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ 14 ಮೊಮ್ಮಕ್ಕಳನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ:
ಮೃತರ ಪಾರ್ಥಿವ ಶರೀರವನ್ನು ಆಗಸ್ಟ್ 21ರಂದು ಬೆಳಗ್ಗೆ 10.30ಕ್ಕೆ ಕೆಲರಾಯಿಯ ಸಂತ ಅನ್ನಾ ಚರ್ಚ್‌ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಬೆಳಗ್ಗೆ 11 ಗಂಟೆಗೆ ಚರ್ಚ್‌ನಲ್ಲಿ ಪವಿತ್ರ ಬಲಿಪೂಜೆ ನೆರವೇರಲಿದೆ. ನಂತರ ಅಂತ್ಯಕ್ರಿಯೆ ನಡೆಯಲಿದೆ.