ಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ: ಕೆ. ಹರೀಶ್ ಕುಮಾರ್

ಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ: ಕೆ. ಹರೀಶ್ ಕುಮಾರ್


ಮಂಗಳೂರು: ಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಜಾತಿ-ಧರ್ಮದ ಆಧಾರದ ಮೇಲೆ ವಿಭಜನೆಯ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳು ಹಾಗೂ ಸಾಂವಿಧಾನಿಕ ಆಶಯಗಳ ಬುಡಮೇಲು ಮಾಡುವ ಮನಸ್ಥಿತಿಯ ವ್ಯಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಪ್ರತಿಪಾದಿಸಿದ್ದಾರೆ.


80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ.ಕ.ಜಿಲ್ಲಾ ಕಾಂಗ್ರೆಸ ಸಮಿತಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮಲ್ಲಿ  ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಮಾತನಾಡಿದರು.  


ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಸಂಗ್ರಾಮ ಹಾಗೂ ಆಧುನಿಕ ಭಾರತದ ನಿರ್ಮಾಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಐತಿಹಾಸಿಕ ಪಾತ್ರ ವಹಿಸಿದೆ. ದೇಶದ ಪ್ರಜಾಪ್ರಭುತ್ವಕ್ಕೆ ನಮ್ಮ ಸಂವಿಧಾನವೇ ಶ್ರೀರಕ್ಷೆಯಾಗಿದೆ. ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದ ರಾಜಕೀಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.


ಈ ಸಂದರ್ಭ ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ಬ್ಲಾಕ್ ಅಧ್ಯಕ್ಷ ಜೆ. ಅಬ್ದುಲ್ ಸಲೀಂ, ಮುಂಚೂಣಿ ಘಟಕಾಧ್ಯಕ್ಷರಾದ ಎಸ್.ಅಪ್ಪಿ, ಮನೋರಾಜ್ ರಾಜೀವ, ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜಾ, ಸುಹಾನ್ ಆಳ್ವ, ಚೇತನ್ ಬೆಂಗ್ರೆ, ಡಿಸಿಸಿ ಪದಾಧಿಕಾರಿಗಳಾದ ನೀರಜ್ ಚಂದ್ರಪಾಲ್, ಜಯಶೀಲ ಅಡ್ಯಂತಾಯ, ಶುಭೋದಯ ಆಳ್ವ, ಟಿ.ಕೆ.ಸುಧೀರ್, ಶಬೀರ್.ಎಸ್, ಲಕ್ಷ್ಮೀ ನಾಯರ್, ಗಿರೀಶ್ ಶೆಟ್ಟಿ, ಯೋಗಿಶ್ ಕುಮಾರ್, ಎನ್.ಪಿ ಮನುರಾಜ್, ಸಾರಿಕ ಪೂಜಾರಿ, ಮುಖಂಡರಾದ ನಮಿತಾ ಡಿ.ರಾವ್, ಸಬಿತಾ ಮಿಸ್ಕಿತ್, ಮಂಜುಳಾ ನಾಯಕ್, ಗೀತಾ ಅತ್ತಾವರ, ಕವಿತಾ ವಾಸು, ದಿನೇಶ್ ರಾವ್, ಅಶೋಕ್ ಡಿ.ಕೆ, ಸುಧಾಕರ್ ಜೋಗಿ, ಅಮೃತ್ ಕದ್ರಿ, ಸರಳ ಕರ್ಕೇರ, ಆಲ್ವಿನ್ ಪ್ರಕಾಶ್, ಜಿ.ಎ ಜಲೀಲ್, ರೋಬಿನ್ ಪ್ರೀತಂ, ರಮಾನಂದ ಪೂಜಾರಿ, ಜಾರ್ಜ್, ರಹಿಮಾನ್ ಕೋಡಿಜಾಲ್, ಸಮರ್ಥ್ ಭಟ್, ಟಿ.ಕೆ.ಶೈಲಜಾ, ಚಂದ್ರಕಲಾ ಜೋಗಿ, ವಿಶ್ವನಾಥ್ ಬಜಾಲ್, ಪೃಥ್ವಿರಾಜ್,  ಸೌಹಾನ್, ನಾಗೇಶ್ ತೊಕ್ಕೊಟ್ಟು, ದುರ್ಗ ಪ್ರಸಾದ್, ಪದ್ಮನಾಭ ರೈ, ಲಕ್ಷ್ಮಣ್ ಶೆಟ್ಟಿ, ಸುಮನ್, ಮೊಹಮ್ಮದ್ ಹನೀಫ್, ಫಯಾಝ್ ಅಮ್ಮೆಮ್ಮಾರ್, ಕೀರ್ತನ್ ಕೊಡಪಾಲ ಉಪಸ್ಥಿತರಿದ್ದರು. 


ಧ್ವಜ ಪ್ರಭಾರಿಯಾಗಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಜೋಕಿಂ ಡಿಸೋಜಾ ಕಾರ್ಯನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article