ಶಬರಿಮಲಾ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಪ್ರತಿಭಟನೆ

ಶಬರಿಮಲಾ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಪ್ರತಿಭಟನೆ

ಮಂಗಳೂರು: ಸಂಸತ್ ಭವನದ ಮುಂಭಾಗದಲ್ಲಿ ಕೇಸರಿ ಬಟ್ಟೆ ಧರಿಸಿ ಸನಾತನ ಧರ್ಮ ಮತ್ತು ಅಯೋಧ್ಯೆ ರಾಮಮಂದಿರ ಅವಹೇಳನ ಮಾಡಿದ ಸಂಸದ್ ಸದಸ್ಯ ಪಪ್ಪು ಯಾದವ್ ಮತ್ತು ವಿರೋಧ ಪಕ್ಷಗಳು ಹಾಗೂ ರಾಹುಲ್ ಗಾಂಧಿ ವಿರುದ್ಧ ಮಂಗಳೂರಿನ  ಶಬರಿಮಲಾ ಅಯ್ಯಪ್ಪ ಸೇವಾ ಸಮಾಜಂ ವತಿಯಿಂದ ಶುಕ್ರವಾರ ಸಂಜೆ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರಾದ ಕುಂಟಾರು ರವೀಶ್ ತಂತ್ರಿ, ಹಿಂದು ಧರ್ಮಕ್ಕೆ ಆತಂಕ  ಎದುರಾದಾಗಲೆಲ್ಲಾ. ಹಿಂದೂ ಸಮಾಜ ಅದನ್ನು ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ಪಪ್ಪು ಯಾದವ್ನಂತವರಿಗೆ ಈ ಸಮಾಜ ಹೆದರುವುದಿಲ್ಲ. ದೇಶದಲ್ಲಿ ಆಂತರಿಕ ಕ್ಷೋಭೆಯನ್ನು ಸೃಷ್ಟಿಸುವವರ ವಿರುದ್ಧ ಸೂಕ್ತ ಕ್ರಮವಾಗಬೇಕೆ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಗೋಪಾಲ್ ರೈ, ಕಾತ್ಯಾಯಿನಿ ರಾವ್, ವಿಹಿಂಪ ಮುಖಂಡರಾದ ಗೋಪಾಲ ಕುತ್ತಾರ್, ಮಂಗಳೂರಿನ  ಶಬರಿಮಲಾ ಅಯ್ಯಪ್ಪ ಸೇವಾ ಸಮಾಜಂ ಗಣೇಶ್ ಪೊದುವಾಳ್, ಪ್ರಮುಖರಾದ ಆನಂದ ಶೆಟ್ಟಿ, ವಿಕ್ರಂ ಕದ್ರಿ, ಮಂಜುನಾತ್, ಮೋಹನ್ ಬರ್ಕೆ,  ವಿಜಯ ಕಿರಣ್ ಕೊಟ್ಟಾರಿ ಮತ್ತಿತರರು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article