ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ

ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ


ಮಂಗಳೂರು: ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ  ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ  ಶತರುದ್ರಾಭಿಷೇಕ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡವು.

ದೇವಸ್ಥಾನದ ಸನ್ನಿಧಿಯಲ್ಲಿ ವೇದಘೋಷ, ಸಾಮೂಹಿಕ ರುದ್ರಪಾರಾಯಣ ಹಾಗೂ ವಿಶೇಷ ಅಭಿಷೇಕಗಳೊಂದಿಗೆ ಮಹಾಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಲೋಕಕಲ್ಯಾಣ ಹಾಗೂ ಸಮಾಜದ ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಶಿವಳ್ಳಿ ಸ್ಪಂದನದ ಮಂಗಳೂರು ಅಧ್ಯಕ್ಷ ವಾಸುದೇವ ಭಟ್, ಕಾರ್ಯದರ್ಶಿ ಕೃಷ್ಣ ಭಟ್, ಖಜಾಂಚಿ ರಘುರಾಮ ರಾವ್, ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ ಭಟ್ ಉಪಸ್ಥಿತರಿದ್ದರು.

ಕದ್ರಿ ವಲಯದ ಗೌರವಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಅಧ್ಯಕ್ಷೆ ಶೀಲಾ ಜಯಪ್ರಕಾಶ್, ಕಾರ್ಯದರ್ಶಿ ವೈ. ರವಿಕಾಂತ ಭಟ್, ಖಜಾಂಚಿ ವನಿತಾ ರಾಮಚಂದ್ರ ಭಟ್, ಉಪಾಧ್ಯಕ್ಷರಾದ ಸುಧಾಕರ ಭಟ್ ಆರೂರು, ಸದಾನಂದ ರಾವ್ ಪೇಜಾವರ, ಜೊತೆ ಕಾರ್ಯದರ್ಶಿ ಪ್ರೀತಿ ಭಟ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article