ಆಳ್ವಾಸ್ ಪ್ರಗತಿ–2026 ಸಮಾಪನ: 15,539 ಉದ್ಯೋಗಾಕಾಂಕ್ಷಿಗಳಲ್ಲಿ 2,394 ಮಂದಿಗೆ ಸ್ಥಳದಲ್ಲೇ ಉದ್ಯೋಗ
ವಿವಿಧ ಕಂಪನಿಗಳಿಂದ ನೇಮಕ:
ಕೋಡಯಂಗ್ ನಾಲ್ವರನ್ನು ₹8.36 ಲಕ್ಷ ವಾರ್ಷಿಕ ವೇತನ ಪ್ಯಾಕೇಜ್‌ಗೆ ಹಾಗೂ ಇಎಕ್ಸ್ಎಲ್ 38 ಅಭ್ಯರ್ಥಿಗಳನ್ನು ₹3 ಲಕ್ಷ ವೇತನಕ್ಕೆ ಆಯ್ಕೆ ಮಾಡಿಕೊಂಡಿವೆ. ಎಚ್‌ಎಲ್ ಮಾಂಡೋ 99 ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ₹3.4 ಲಕ್ಷ ಪ್ಯಾಕೇಜ್ ನೀಡಲಿದೆ. ಎಎನ್‌ಝೆಡ್ 84 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ₹3ರಿಂದ ₹4 ಲಕ್ಷ ವೇತನ ಪ್ಯಾಕೇಜ್ ಘೋಷಿಸಿದೆ.
ಟಾಟಾ ಎಲೆಕ್ಟ್ರಾನಿಕ್ಸ್ 216 ಹಾಗೂ ಸೆಜಿಲಿಟಿ 65 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿವೆ. ಫೈಎಸ್ ಡಿಜಿಟಲ್ 32, ಎಕ್ಸ್ಪರ್ಟೀಸ್ 116, ಎಲೋಜಿಕ್ಸಾ ಒಬ್ಬ ಹಾಗೂ ಬುಲ್ಹರ್ 14 ಅಭ್ಯರ್ಥಿಗಳನ್ನು ಆಯ್ಕೆ ಅಥವಾ ಶಾರ್ಟ್‌ಲಿಸ್ಟ್ ಮಾಡಿವೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 20 ಎಂಜಿನಿಯರಿಂಗ್ ಅಭ್ಯರ್ಥಿಗಳನ್ನು ₹6 ಲಕ್ಷ ವಾರ್ಷಿಕ ವೇತನದ ಹುದ್ದೆಗಳಿಗೆ ಪರಿಗಣಿಸಿದೆ.
ಸುಳ್ಯದ ಕಲ್ಲಗುಂಡಿ ಮೂಲದ ಶ್ವೇತಾ, ಕೊಡ್ಯಾಲ್‌ಬೈಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ಪದವೀಧರೆಯಾಗಿದ್ದು, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್‌ಗೆ ಆಯ್ಕೆಯಾಗಿದ್ದಾರೆ.
ಆಯ್ಕೆ ಮತ್ತು ಶಾರ್ಟ್‌ಲಿಸ್ಟ್ ವಿವರಗಳನ್ನು ಒಂದು ವಾರದೊಳಗೆ www.alvaspragati.comನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

