ರೋಟರಿನ ಪಿ.ಯು. ಕಾಲೇಜಿನ 2026-2027ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನೆ
Friday, August 28, 2026
ಮೂಡುಬಿದಿರೆ: ರೋಟರಿ ಪಿ.ಯು. ಕಾಲೇಜಿನ 2026-2027ನೇ ಶೈಕ್ಷಣಿಕ ಸಾಲಿನ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಆಡಿಟೋರಿಯಂನಲ್ಲಿ ಗುರುವಾರ ನಡೆಯಿತು.
ಕಾಲೇಜಿನ ಸಂಚಾಲಕರಾದ ರೋ. ಜೆ.ಡಬ್ಲ್ಯು. ಪಿಂಟೋ ಅವರು ದೀಪ ಬೆಳಗಿಸಿ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ಸೇವೆಯನ್ನು ಮಾಡುತ್ತಾ ಈ ಸಮಾಜಕ್ಕೆ ಉತ್ತಮ ನಾಗರಿಕರಾಗಿ ಬೆಳೆಯಿರಿ ಎಂದರು.
ಕಾಲೇಜಿನ ಪ್ರಾಂಶುಪಾಲ ರವಿ ಕುಮಾರ್, ಉಪನ್ಯಾಸಕರು ಮತ್ತು ಎಲ್ಲಾ ಎನ್ ಎಸ್ ಎಸ್ ಸ್ವಯಂ ಸೇವಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲೆ ವೈಶಾಲಿ ಸನಿಲ್ ಸ್ವಾಗತಿಸಿದರು. ಗಣಿತ ಉಪನ್ಯಾಸಕಿ ನವ್ಯಶ್ರೀ ವಂದಿಸಿದರು. ಗಣಿತ ಉಪನ್ಯಾಸಕಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು.
