ಮೂಡುಬಿದಿರೆ ಛಾಯಾಗ್ರಾಹಕ ಅಭಯ್ ಕುಮಾರ್ ಗೆ "ಛಾಯಾರತ್ನ" ಪ್ರಶಸ್ತಿ ಪ್ರದಾನ
Wednesday, August 19, 2026
ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ, ಬ್ರಹ್ಮಾವರ ವಲಯದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ಪದ್ಮಶ್ರೀ ಸ್ಟುಡಿಯೋ ಮಾಲಕ ಅಭಯ್ ಕುಮಾರ್ ಅವರಿಗೆ ‘ಛಾಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೋಟರಿ ಬ್ರಹ್ಮಾವರ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಸಮಾರಂಭದಲ್ಲಿ14 ಮಂದಿ ಛಾಯಾಗ್ರಾಹಕರಿಗೆ ‘ಛಾಯಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.