ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಸಂಭ್ರಮ: ಮಾಧ್ಯಮ ಮತ್ತು ಅಂತರ್ಜಾಲದ ಸದ್ಬಳಕೆ ಬಗ್ಗೆ ಮಾಹಿತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಸಂಭ್ರಮ: ಮಾಧ್ಯಮ ಮತ್ತು ಅಂತರ್ಜಾಲದ ಸದ್ಬಳಕೆ ಬಗ್ಗೆ ಮಾಹಿತಿ


ಮೂಡುಬಿದಿರೆ: ಮೂಡುಬಿದಿರೆ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ವಿದ್ಯಾರ್ಥಿಗಳಿಗೆ ಮಾಧ್ಯಮ ಮತ್ತು ಅಂತರ್ಜಾಲದ ಸದ್ಬಳಕೆ ಬಗ್ಗೆ ಮಾಹಿತಿ ಕಾಯ೯ಕ್ರಮ ನಡೆಯಿತು. 

ಪತ್ರಕತ೯ ಯಶೋಧರ ವಿ. ಬಂಗೇರ ಅವರು ಮಾಧ್ಯಮ ಮತ್ತು ಅಂತರ್ಜಾಲದ ಸದ್ಬಳಕೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. 

ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್  ರಾಜಾರಾಮ ನಾಗರಕಟ್ಟೆ ಅವರು ಮಾದಕ ದ್ರವ್ಯಗಳ ವ್ಯಸನ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿ  ವಿದ್ಯಾರ್ಥಿಗಳು ನೈತಿಕ ಮತ್ತು ಬೌದ್ಧಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ  ಉತ್ತಮ ವ್ಯಕ್ತಿಗಳಾಗಿ  ಬಾಳಿ ಎಂದು ಹಾರೈಸಿದರು.

ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ವಿ ಶೆಣೖ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article