ಗಾಳಿ, ಮಳೆ: ಪುತ್ತಿಗೆಯಲ್ಲಿ ಮನೆ ಮೇಲೆ ಬಿದ್ದ ಭಾರೀ ಗಾತ್ರದ ಮರ, ಹಾನಿ

ಗಾಳಿ, ಮಳೆ: ಪುತ್ತಿಗೆಯಲ್ಲಿ ಮನೆ ಮೇಲೆ ಬಿದ್ದ ಭಾರೀ ಗಾತ್ರದ ಮರ, ಹಾನಿ


ಮೂಡುಬಿದಿರೆ: ಭಾನುವಾರ ಬೀಸಿದ ಗಾಳಿ ಮಳೆಗೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲು ಶಾಲೆ ಬಳಿಯ ನಿವಾಸಿ ನೀಲಯ್ಯ ಪೂಜಾರಿ ಅವರ ಮನೆಯ ಮೇಲೆ  ಬೃಹತ್ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ.

ಮರ ಬಿದ್ದ ಪರಿಣಾಮ ಮನೆಯ ಮುಂಭಾಗದ ಭಾಗಕ್ಕೆ ಹಾನಿಯಾಗಿದ್ದು, ಇತ್ತೀಚೆಗೆ ಅಳವಡಿಸಿದ್ದ ಶೀಟುಗಳು, ಮೆಚಾವನಿ ಶೀಟುಗಳು ಸೇರಿದಂತೆ ವಿವಿಧ ಭಾಗಗಳು ಹಾನಿಗೊಂಡಿವೆ. ಘಟನೆಯಿಂದ ಮನೆಯವರಿಗೆ ಆರ್ಥಿಕ ನಷ್ಟ ಉಂಟಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಭಾನುವಾರ ಸಂಜೆ ಸುರಿದ ಭಾರಿ ಗಾಳಿ ಮಳೆಯ ಸಂದರ್ಭ ಈ ಘಟನೆ ಸಂಭವಿಸಿದೆ. ಮರ ಮನೆಯ ಮೇಲೆ ಬಿದ್ದಿದ್ದರಿಂದ ಮನೆಯ ಮುಂಭಾಗದ ಭಾಗಕ್ಕೆ ಹಾನಿಯಾಗಿದ್ದು, ಹಾನಿಯ ಪ್ರಮಾಣವನ್ನು ಪರಿಶೀಲಿಸಿ ಪರಿಹಾರ ಒದಗಿಸಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article